ಕುಶಾಲನಗರ, ಜ. ೪: ಭಾರತೀಯ ಸೈನ್ಯಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಕೊಡಗಿನಿಂದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೇನೆಗೆ ಸೇರುವ ಮೂಲಕ ಕೊಡಗಿನ ವೀರ ಪರಂಪರೆ ಮುಂದುವರಿಯ ಬೇಕೆಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಆಶಯ ವ್ಯಕ್ತಪಡಿಸಿದರು.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಯುವ ವಾಹಿನಿ ವತಿಯಿಂದ ಇತ್ತೀಚೆಗೆ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ದಂಪತಿ ಹಾಗೂ ಇತರ ಸೇನಾ ಯೋಧರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದ ಯೋಧ ನಮನಂ ಶ್ರದ್ಧಾಂಜಲಿ ರಥಯಾತ್ರೆಯ ಸಮಾರೋಪ ಸಮಾರಂಭದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕೊಡಗಿನವರಿಗೆ ದೇಶ ಪ್ರೇಮದ ಬಗ್ಗೆ ಪಾಠ ಹೇಳಿಕೊಡಬೇಕಿಲ್ಲ. ಕೊಡಗಿನವರ ಶೌರ್ಯದ ಬಗ್ಗೆ ಇಡೀ ಜಗತ್ತಿಗೆ ಗೊತ್ತಿದೆ ಎಂದು ಅನಂತ್ ಕುಮಾರ್ ಹೆಗ್ಡೆ ಹೇಳಿದರು. ಜಗತ್ತಿಗೆ ಯುದ್ಧ ವಿದ್ಯೆಯನ್ನು ಕೊಟ್ಟಂತಹ ನಾಡು ಭಾರತ. ಯುದ್ಧದ ವಿಚಾರದಲ್ಲಿ ಭಾರತಕ್ಕೆ ಸಾವಿರಾರು ವರ್ಷಗಳ ತೇಜೋಮಯ ಇತಿಹಾಸವಿದೆ. ಅಂತಹ ಇತಿಹಾಸದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸವನ್ನು ಹಿಂದಿನಿAದಲೂ ಈ ದೇಶದಲ್ಲಿ ಮಾಡಿಲ್ಲ. ಹೋರಾಡಿ ಗೆದ್ದವರನ್ನು ಸೋತವರೆಂದು; ಸೋತವರನ್ನು ಗೆದ್ದವರೆಂದು ಬಿಂಬಿಸುವ ಕಾರ್ಯ ಈ ಹಿಂದಿನಿAದಲೂ

(ಮೊದಲ ಪುಟದಿಂದ) ಈ ದೇಶದಲ್ಲಿ ನಡೆಯುತ್ತಾ ಬಂದಿತ್ತು. ಇದರಿಂದಾಗಿಯೇ ದೇಶಕ್ಕಾಗಿ ಹೋರಾಡಿದ ಅದೆಷ್ಟೊ ನೈಜ ಹೋರಾಟಗಾರರು ಕಡೆಗಣಿಸಲ್ಪಟ್ಟಿದ್ದಾರೆ ಎಂದು ಅನಂತ್ ಕುಮಾರ್ ಹೆಗ್ಡೆ ವಿಷಾದಿಸಿದರು. ಸೈನಿಕ ಎಂಬುದು ವೃತ್ತಿಯಲ್ಲ ಅದೊಂದು ಪ್ರವೃತ್ತಿ ಮನೋವೃತ್ತಿ ಎಂದು ಬಣ್ಣಿಸಿದ ಅವರು ಸೇವೆಯಿಂದ ನಿವೃತ್ತಿ ಹೊಂದಿದ್ದರೂ ಕೂಡ ಪ್ರಧಾನಿಯವರ ಕೋರಿಕೆಗೆ ಮನ್ನಣೆ ನೀಡಿ ದೇಶ ಸೇವೆ ಮುಂದುವರಿಸಿದ್ದ ಬಿಪಿನ್ ರಾವತ್ ಹಾಗೂ ಇತರರನ್ನು ನಾವೆಲ್ಲರೂ ಸದಾ ಸ್ಮರಿಸುವಂತಾಗಬೇಕೆAದರು.

ದೇಶದ ಸುಭದ್ರತೆಗೆ ಸೇನೆ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾಧ್ಯಕ್ಷರಾದ ಸೋಮಣ್ಣ ಅವರು ಮಾತನಾಡಿ ಯುವಕರು ಸ್ವ ಇಚ್ಚೆಯಿಂದ ಸೇನೆಗೆ ಸೇರಲು ಮುಂದಾದರೆ ಮಾತ್ರ ಈ ದೇಶ ಸುಭದ್ರವಾಗಿರಲು ಸಾಧ್ಯ. ಸೈನ್ಯವನ್ನು ಯಾವುದೇ ಜಾತಿ ಧರ್ಮ ಪಕ್ಷಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದ ಅವರು ಸಮಾಜವು ಸೈನಿಕರಿಗೆ ಮನೋಸ್ಥೆöÊರ್ಯವನ್ನು ತುಂಬುವ ಕೆಲಸ ಮಾಡಬೇಕೆಂದರು. ಸೈನಿಕರ ಹೋರಾಟದ ಬಗ್ಗೆ ಸಾಕ್ಷಿ ಕೇಳುವವರ ಕುರಿತು ಹರಿಹಾಯ್ದ ಅವರು ಶತ್ರುಗಳು ಧಾಳಿ ಮಾಡಿದಾಗ ಅವರೊಂದಿಗೆ ಯುದ್ಧ ಮಾಡಿ ಶತ್ರುಗಳನ್ನು ಸದೆಬಡಿಯಲು ಸೈನಿಕರು ಸೇನೆಗೆ ಸೇರಿದ್ದಾರೆಯೆ ಹೊರತು ಹೋರಾಟವನ್ನು ವೀಡಿಯೋ ಮಾಡುವುದಕ್ಕಾಗಿ ಅಲ್ಲ ಎಂಬುದನ್ನು ಸಂಬAಧಿಸಿದವರು ಮೊದಲು ಅರಿತುಕೊಳ್ಳಬೇಕೆಂದರು.

ಹಿAದೂ ಯುವ ವಾಹಿನಿಯ ಸಂಯೋಜಕ ಚೇತನ್ ಪ್ರಾಸ್ತಾವಿಕ ನುಡಿಯಾಡಿ ಡಿ.೨೪ರಂದು ಮಡಿಕೇರಿಯ ಓಂಕಾರೇಶ್ವರ ಸನ್ನಿಧಿಯಿಂದ ಆರಂಭವಾದ ರಥ ಯಾತ್ರೆ ಜಿಲ್ಲೆಯ ಎಲ್ಲಾ ಪಂಚಾಯ್ತಿಗಳ ಕೇಂದ್ರ ಸ್ಥಾನವನ್ನು ತಲುಪಿದೆ. ದೇಶಭಕ್ತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಯಾತ್ರೆ ಕೈಗೊಳ್ಳಲಾಗಿತ್ತು ಎಂದರು. ವೇದಿಕೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಉಪಾಧ್ಯಕ್ಷ ಲಾಲಾ ಅಯ್ಯಣ್ಣ, ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ, ಕುಶಾಲನಗರ ತಾಲೂಕು ಅಧ್ಯಕ್ಷ ಮಧು ಉಪಸ್ಥಿತರಿದ್ದರು. ಭಾರತಾಂಬೆಯ ಭಾವಚಿತ್ರಕ್ಕೆ ಹಾಗೂ ಶ್ರದ್ಧಾಂಜಲಿ ರಥಕ್ಕೆ ಪುಷ್ಪಾರ್ಚನೆ ಮಾಡಿ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕುಶಾಲನಗರದ ವಿಶ್ವ ಹಾಗೂ ಮಹೇಶ್, ಅಮಿನ್ ದೇಶಭಕ್ತಿ ಗೀತೆ ಹಾಡಿದರು. ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಮಹೇಶ್ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್ ಸ್ವಾಗತಿಸಿದರು. ಸೋಮವಾರಪೇಟೆ ಪ್ರಧಾನ ಕಾರ್ಯದರ್ಶಿ ಭೋಜೆಗೌಡ ವಂದಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ತಾವರೆಕೆರೆಯಿಂದ ಹೊರಟ ಶ್ರದ್ಧಾಂಜಲಿ ರಥಯಾತ್ರೆ ಮುಖ್ಯ ಬೀದಿಗಳ ಮೂಲಕ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಆಗಮಿಸಿತು. ಫೀ.ಮಾ.ಕಾರ್ಯಪ್ಪ ವೃತ್ತದಲ್ಲಿ ನಾಲ್ಕು ಜೆಸಿಬಿ ಯಂತ್ರಗಳನ್ನು ಬಳಸಿ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು.