ಸೋಮವಾರಪೇಟೆ, ಜ. ೪: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದಲ್ಲಿ ನೂತನವಾಗಿ ರಚನೆಗೊಂಡಿರುವ ಸಿದ್ದಾರ್ಥ ಸೇವಾ ಸಮಿತಿಗೆ ಚಾಲನೆ ನೀಡಲಾಯಿತು.
ಗ್ರಾಮಾಭಿವೃದ್ಧಿಯೊಂದಿಗೆ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ನಿಟ್ಟಿನಲ್ಲಿ ಸಮಿತಿ ರಚಿಸಲಾಗಿದೆ ಎಂದು ಅಧ್ಯಕ್ಷ ಕೆ.ಆರ್. ನವೀನ್ಕುಮಾರ್ ತಿಳಿಸಿದರು. ಸಮಿತಿಯ ಉಪಾಧ್ಯಕ್ಷರಾಗಿ ಎಸ್.ವಿ. ಪ್ರಭಾಕರ್, ಕಾರ್ಯದರ್ಶಿಯಾಗಿ ಕೆ.ಎಸ್. ಲೋಹಿತ್ ಕುಮಾರ್, ಖಜಾಂಚಿ ಕೆ.ಆರ್. ಯತೀಶ್ ಅವರುಗಳನ್ನು ನೇಮಕ ಗೊಳಿಸಲಾಯಿತು.
ಸಮಿತಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಶೇಖರ್ ವಹಿಸಿದ್ದರು. ಸದಸ್ಯರಾದ ಚಂದ್ರಶೇಖರ್, ದಿವ್ಯಾ, ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ್, ಕೂತಿನಾಡು ಸಬ್ಬಮ್ಮ ದೇವಾಲಯ ಸಮಿತಿ ಅಧ್ಯಕ್ಷ ಜೋಯಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.