ವೀರಾಜಪೇಟೆ, ಜ. ೪: ಸಂಸ್ಥ ಕೇರಳ ಸುನ್ನಿ ಬಾಲವೇದಿ ಡಿ. ೨೬ ಇದರ ಸಂಸ್ಥಾಪನಾ ದಿನದ ಅಂಗವಾಗಿ ಕಲ್ಲುಬಾಣೆ ವರ್ತುಲದ ವತಿಯಿಂದ ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಕಲ್ಲುಬಾಣೆಯ ದಾರುಲ್ ಇಸ್ಲಾಂ ಮದರಸದ ಆವರಣದಲ್ಲಿ ಮಸೀದಿಯ ಅಧ್ಯಕ್ಷ ಪಿ.ಕೆ. ಅಫ್ಸ್ಲ್ ಧ್ವಜಾರೋಹಣ ನೆರವೇರಿಸಿದರು. ಸಭೆ ಮತ್ತು ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದಲ್ಲಿ ಎಸ್.ಕೆ.ಎಸ್. ಬಿ.ವಿಯ ಅಧ್ಯಕ್ಷ ಸಫ್ವಾನ್, ಸಮಾಜಸೇವಕ ಸಿ.ಎ. ನಾಸೀರ್, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಕೆ.ಟಿ. ಬಶೀರ್ ಮತ್ತು ಶಹದೀರ್ ಆಲಿ, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಯುಸೂಫ್, ಕಾರ್ಯದರ್ಶಿ ಶಾಹುದ್ ಹಾಗೂ ಅಶ್ರಫ್, ಅಚ್ಚು, ಹನೀಫ್ ಪೈಜಿ, ಜಬ್ಬರ್ ಪೈಜಿ, ಆಲಿ ಮುಸ್ಲಿಯಾರ್ ಮತ್ತು ವಿದ್ಯಾರ್ಥಿ ಸಂಘದ ಸದಸ್ಯರುಗಳು ಭಾಗವಹಿಸಿದ್ದರು.