ಗೋಣಿಕೊಪ್ಪ ವರದಿ, ಜ. ೫: ಮಾಯಮುಡಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ೨೨.೫೪ ಲಕ್ಷ ರೂ. ನಿವ್ವಳ ಲಾಭವಾಗಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ ತಿಳಿಸಿದರು.

ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಮಾತನಾಡಿದ ಅವರು ಸದಸ್ಯರುಗಳಿಗೆ ಶೇ. ೧೮ ಡಿವಿಡೆಂಟ್ ನೀಡಲಾಗುವುದು. ೬೬೯.೨೫ ಲಕ್ಷ ರೂ ಠೇವಣಿ ಇದ್ದು, ಕೃಷಿ ಮತ್ತು ಕೃಷಿಯೇತರ ಸಾಲವಾಗಿ ೧೦ ಕೋಟಿ ರೂ. ನೀಡಲಾಗಿದ್ದು, ಮರುಪಾವತಿ ಪ್ರಗತಿಯಲ್ಲಿದೆ. ರೈತರಿಗೆ ಉಪಯೋಗವಾಗುವಂತೆ ಕೃಷಿ ಉಪಕರಣ, ಔಷಧ, ಕಾಫಿ ಕೊಯ್ಲುವಿಗೆ ಬಳಸುವ ತಾಟ್ ಮಾರಾಟ ಮಾಡಲಾಗುತ್ತಿದೆ. ಕಾಫಿ ಬೀಜ ಔಟ್‌ಟರ್ನ್ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದ್ದು, ಇದರ ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.

ಸAಘದ ಉಪಾಧ್ಯಕ್ಷ ಜಂಗಮರ ಎಸ್. ಲೋಕೇಶ್, ನಿರ್ದೇಶಕರಾದ ನಾಮೇರ ಸಿ. ವಿಶ್ವನಾಥ್, ಆಪಟ್ಟೀರ ಎಸ್. ನಾಚಯ್ಯ, ಆಪಟ್ಟೀರ ಎ. ಬೋಪಣ್ಣ, ಕಾಳಪಂಡ ಎ. ಸತೀಶ್, ಚೆಪ್ಪುಡೀರ ಎಸ್. ಅಪ್ಪಣ್ಣ, ಕುಂಬಾರರ ಆರ್. ಶ್ರೀನಿವಾಸ್, ನಾಮಧಾರಿ ಆರ್. ಪ್ರವೀಣ, ಸಣ್ಣುವಂಡ ಎ. ಗುಣ, ಮಲ್ಲೇಂಗಡ ಪಿ. ಮುತ್ತಮ್ಮ, ಎಚ್. ಡಿ. ರಮೇಶ, ಪಂಜರಿಯರವರ ಪಿ. ಅಪ್ಪಣ್ಣ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಶಂಕರ, ಸಿಇಒ ಎಂ. ಕೆ. ಇಸ್ಸಾರ್ ಇದ್ದರು.