ಮಡಿಕೇರಿ, ಜ. ೪ : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜನವರಿ, ೨೧ ಮತ್ತು ೨೨ ರಂದು ಡಾ.ಸಿದ್ದಲಿಂಗಯ್ಯ ಅವರ ಬದುಕು-ಬರಹ ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. ಈ ವಿಚಾರ ಸಂಕಿರಣದಲ್ಲಿ ಪರ್ಯಾಯ ಗೋಷ್ಠಿಗಳು ನಡೆಯಲಿದೆ. ವಿಚಾರ ಸಂಕಿರಣದ ಪರ್ಯಾಯ ಗೋಷ್ಠಿಯಲ್ಲಿ ಡಾ.ಸಿದ್ಧಲಿಂಗಯ್ಯನವರ ಬದುಕು-ಬರಹ ಕುರಿತು ಪ್ರಬಂಧ ಮಂಡಿಸುವವರು ಅರ್ಜಿಯೊಂದಿಗೆ ಪ್ರಬಂಧವನ್ನು ಸಲ್ಲಿಸಬೇಕು. ಪ್ರಬಂಧವನ್ನು ತಾ. ೧೨ ರೊಳಗೆ ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ನಿಬಂಧನೆಗೊಳಪಟ್ಟು ಅರ್ಜಿಯೊಂದಿಗೆ ಪ್ರಬಂಧಗಳನ್ನು ಸಲ್ಲಿಸಲು ಕೋರಿದೆ. ಹೆಚ್ಚಿನ ವಿವರಗಳಿಗೆ ಅಕಾಡೆಮಿಯ ವೆಬ್‌ಸೈಟ್ hಣಣಠಿ://sಚಿhiಣhಥಿಚಿಚಿಛಿಚಿಜemಥಿ.ಞಚಿಡಿಟಿಚಿಣಚಿಞಚಿ.gov.iಟಿ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟಾçರ್ ಎನ್. ಕರಿಯಪ್ಪ ತಿಳಿಸಿದ್ದಾರೆ.