ಮಡಿಕೇರಿ, ಜ. ೫: ಕೊಡಗಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ತಲಕಾವೇರಿ, ಭಾಗಮಂಡಲ, ಪಾಡಿ ಇಗ್ಗುತಪ್ಪ ಹಾಗೂ ಓಂಕಾರೇಶ್ವರ, ಇರ್ಪು ರಾಮೇಶ್ವರ ಕ್ಷೇತ್ರಗಳನ್ನು ಪವಿತ್ರ ಕ್ಷೇತ್ರಗಳನ್ನಾಗಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ಷೇತ್ರಗಳನ್ನು ದೇವಸ್ಥಾನಗಳ ನಗರಿ (ಟೆಂಪಲ್ ಟೌನ್) ಎಂದು ಪರಿವರ್ತಿಸುವ ಸಂಬAಧ ಇಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರನ್ನು ಒಳಗೊಂಡು ಸಭೆ ನಡೆಯಿತು. ಸಭೆಯಲ್ಲಿ ಪ್ರಮುಖವಾಗಿ ಮಾತೆ ಕಾವೇರಿ ಕ್ಷೇತ್ರದ ಪಾವಿತ್ರö್ಯತೆಯನ್ನು ಕಾಪಾಡಿಕೊಳ್ಳುವ ದಿಸೆಯಲ್ಲಿ ಸಾಕಷ್ಟು ಸಲಹೆಗಳೊಂದಿಗೆ ಆಗ್ರಹಗಳೂ ಕೇಳಿ ಬಂದವು.

ಸಭೆಯ ಆರಂಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳನ್ನು ದೇವಸ್ಥಾನಗಳ ನಗರಿಯನ್ನಾಗಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡುವಂತೆ ಕೋರಿದರು. ಕಾವೇರಮ್ಮೆ ಕೊಡವ ಮತ್ತು ಅಮ್ಮಕೊಡವ ಹಿತರಕ್ಷಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ದೇವಯ್ಯ ಮಾತನಾಡಿ, ತಲಕಾವೇರಿ - ಭಾಗಮಂಡಲ ಸೇರಿದಂತೆ ಜಿಲ್ಲೆಯಲ್ಲಿರುವ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ರವಾಸಿಗರಿಂದ ಅಲ್ಲಿನ ಪಾವಿತ್ರö್ಯತೆಗೆ ಧಕ್ಕೆ ಉಂಟಾಗುತ್ತಿದೆ ಅದರಲ್ಲೂ ಪ್ರಮುಖವಾಗಿ ಕಾವೇರಿ ಕ್ಷೇತ್ರವನ್ನು ಪ್ರವಾಸಿ ತಾಣವೆಂದು ಬಿಂಬಿಸಿರುವುದರಿAದ ಅಲ್ಲಿನ ಪಾವಿತ್ರö್ಯತೆ ಧಕ್ಕೆಯಾಗುತ್ತಿದೆ. ಕಾವೇರಿಯು ಗಂಗೆಯಷ್ಟೆ ಪವಿತ್ರ ನದಿಯಾಗಿದ್ದು, ಕಾವೇರಿಯ ಪಾವಿತ್ರö್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಬೇಧ-ಭಾವ ಮರೆತು ಒಟ್ಟಾಗಿ ಕೆಲಸ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಇಂದಿನ ಸಭೆಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಹೊರತು ಅಲ್ಲಿನ ಮೂಲ ನಿವಾಸಿಗಳಿಗಾಗಲಿ, ಸ್ಥಳೀಯರಿಗಾಗಲಿ ತೊಂದರೆ ಕೊಡುವ ಉದ್ದೇಶದಿಂದಲ್ಲ. ಕಾವೇರಿಯ ಸಂರಕ್ಷಣೆಯೆ ನಮ್ಮ ಮೂಲ ಉದ್ದೇಶ ಎಂದು ಹೇಳಿದರು.

ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಸಂಚಾಲಕ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಸ್ಕಂದ ಪುರಾಣ, ಕಾವೇರಿ ಪುರಾಣಾದಿಗಳಲ್ಲಿ ಕಾವೇರಿ ಕ್ಷೇತ್ರದ ಮಹಿಮೆಯನ್ನು ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ಭಗಂಡ ಮಹರ್ಷಿಗಳ ಆವಾಸ ಸ್ಥಾನವಾದ್ದರಿಂದ ಭಾಗಮಂಡಲ ಎಂಬ ಹೆಸರು ಜಗತ್ಪçಸಿದ್ಧವಾಗಿದೆ. ಭಾಗಮಂಡಲವು ಕಾವೇರಿ-ಕನ್ನಿಕೆ-ಸುಜ್ಯೋತಿ ನದಿಗಳ ಸಂಗಮ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ ಹೊರತು ಅಲ್ಲಿನ ಮೂಲ ನಿವಾಸಿಗಳಿಗಾಗಲಿ, ಸ್ಥಳೀಯರಿಗಾಗಲಿ ತೊಂದರೆ ಕೊಡುವ ಉದ್ದೇಶದಿಂದಲ್ಲ. ಕಾವೇರಿಯ ಸಂರಕ್ಷಣೆಯೆ ನಮ್ಮ ಮೂಲ ಉದ್ದೇಶ ಎಂದು ಹೇಳಿದರು.

ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಸಂಚಾಲಕ ಉಳ್ಳಿಯಡ ಎಂ. ಪೂವಯ್ಯ ಮಾತನಾಡಿ, ಸ್ಕಂದ ಪುರಾಣ, ಕಾವೇರಿ ಪುರಾಣಾದಿಗಳಲ್ಲಿ ಕಾವೇರಿ ಕ್ಷೇತ್ರದ ಮಹಿಮೆಯನ್ನು ವಿಸ್ತೃತವಾಗಿ ಉಲ್ಲೇಖಿಸಲಾಗಿದೆ. ಭಗಂಡ ಮಹರ್ಷಿಗಳ ಆವಾಸ ಸ್ಥಾನವಾದ್ದರಿಂದ ಭಾಗಮಂಡಲ ಎಂಬ ಹೆಸರು ಜಗತ್ಪçಸಿದ್ಧವಾಗಿದೆ. ಭಾಗಮಂಡಲವು ಕಾವೇರಿ-ಕನ್ನಿಕೆ-ಸುಜ್ಯೋತಿ ನದಿಗಳ ಸಂಗಮ ಕ್ಷೇತ್ರವಾಗಿದೆ. ಸಹಸ್ರಾರು ಋಷಿವರೇಣ್ಯರು, ಮಹಾತ್ಮರು, ಸಾಧು ಸಂತರು ಪುಣ್ಯಾತ್ಮರು ಈ ಸಂಗಮದಲ್ಲಿ ಮಿಂದು ಪಾವನರಾಗಿದ್ದಾರೆ. ದೇಶ ವಿದೇಶಗಳಿಂದ ಅಸಂಖ್ಯಾತ ಧಾರ್ಮಿಕ ಸಾಧಕರು ಸಂಗಮಕ್ಕೆ ಬಂದು ಮಿಂದು ಹೋಗುತ್ತಿದ್ದಾರೆ. ಕಾವೇರಿ ಉದ್ಭವಿಸುವ ತಲಕಾವೇರಿಯ ಬ್ರಹ್ಮಗಿರಿ ಶಿಖರವು ಪುರಾಣ ಪ್ರಸಿದ್ಧ ಸ್ಥಳವಾಗಿದೆ. ಇಲ್ಲಿ ಸಪ್ತಋಷಿಗಳು ತಪಗೈದ ಕುರುಹಾಗಿ ಬ್ರಹ್ಮಗಿರಿ ಶಿಖರದಲ್ಲಿ ಏಳು ಪುಣ್ಯ ಕುಂಡಿಕೆಗಳು ೧೯೬೦ನೇ ಇಸವಿಯವರೆಗೂ ಸುಸ್ಥಿತಿಯಲ್ಲಿದ್ದುದನ್ನು ಹಿರಿಯ ಭಕ್ತರು ಸ್ಮರಿಸುತ್ತಾರೆ. ಉತ್ತರ ಭಾರತದ ಗಂಗಾ ನದಿಯೂ ಕೂಡ ಕಾವೇರಿಗೆ ಆಗಮಿಸಿ ಮಿಂದು ತನ್ನ ಪಾಪಗಳನ್ನು ಕಳೆದುಕೊಂಡು ಪುನೀತಳಾಗುತ್ತಾಳೆ ಎಂಬುದು ಧಾರ್ಮಿಕ ಪ್ರತೀತಿ. ಕಾವೇರಿ ನದಿಯು ಕರ್ನಾಟಕ, ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಸುಮಾರು ೮ ಕೊಟಿ ಜನರಿಗೆ ನೀರು ಒದಗಿಸುವ ಭಾಗ್ಯನದಿ ಯಾಗಿದ್ದು, ಇಂತಹ ಪುಣ್ಯಕ್ಷೇತ್ರ ಇಂದು ಅಧಾರ್ಮಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕ್ಷೇತ್ರವನ್ನು ದೇವಸ್ಥಾನಗಳ ನಗರಿ ಎಂದು ಘೋಷಿಸಬೇಕು. ಆ ಮೂಲಕ ಕಾವೇರಿ ಕ್ಷೇತ್ರ

(ಮೊದಲ ಪುಟದಿಂದ) ಪರಮಪವಿತ್ರ ತೀರ್ಥಯಾತ್ರಾ ಕೇಂದ್ರವಾಗಿ ಮಾರ್ಪಾಡಾಗಬೇಕೆಂದು ಒತ್ತಾಯಿಸಿದರು.

ಗ್ರೀನ್ ಸಿಟಿ ಫೋರಂ ಸ್ಥಾಪಕಾಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ, ಪ್ರವಾಸಿ ತಾಣಗಳ ಪಟ್ಟಿಯಿಂದ ಕಾವೇರಿ ಕ್ಷೇತ್ರವನ್ನು ತೆಗೆÀಯುವ ಮೂಲಕ ಹಾಗೂ ಕ್ಷೇತ್ರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಮಾಡಿ ಚೆಕ್‌ಪೋಸ್ಟ್ಗಳನ್ನು ಬಿಗಿಗೊಳಿಸಿ; ಪ್ಲಾಸ್ಟಿಕ್ ಬಳಕೆಯನ್ನು ಕ್ಷೇತ್ರದಲ್ಲಿ ನಿಷೇಧಿಸುವ ಮೂಲಕ ಕಾವೇರಿ ಕ್ಷೇತ್ರದ ಪಾವಿತ್ರö್ಯತೆ ಕಾಪಾಡುವಂತಾಗಬೇಕೆAದು ಹೇಳಿದರು.

ಜಿಲ್ಲಾ ಹೊಟೇಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ಮಾತನಾಡಿ, ಧಾರ್ಮಿಕ ಕ್ಷೇತ್ರವನ್ನು ಧಾರ್ಮಿಕ ಕ್ಷೇತ್ರವನ್ನಾಗಿಯೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಲ್ಲಿನ ಸ್ಥಳೀಯರಿಗೂ ತೊಂದರೆಯಾಗದAತೆ ಕಾರ್ಯಪ್ರವೃತ್ತರಾಗುವುದು ಉತ್ತಮ ಎಂದು ಹೇಳಿದರು.

ತಲಕಾವೇರಿ-ಭಾಗಮಂಡಲ ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿಯ ಮಾಜಿ ಕಾರ್ಯದರ್ಶಿ ಜಿ. ರಾಜೇಂದ್ರ ಅವರು ಮಾತನಾಡಿ ಮಾತೆ ಕಾವೇರಿಯಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವಿದ್ದರೂ ಕೂಡ ಕ್ಷೇತ್ರದ ಅಭಿವೃದ್ಧಿಗೆ ಹಣ ಖರ್ಚು ಮಾಡುವಲ್ಲಿ ನಿರ್ಲಕ್ಷö್ಯ ವಹಿಸಿದೆ ಎಂದರು. ಕಾವೇರಿ ಕ್ಷೇತ್ರವನ್ನು ದೇವಸ್ಥಾನ ನಗರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಸಮನ್ವಯ ಸಮಿತಿ ರಚನೆ ಮಾಡಿ ಎಲ್ಲರೊಂದಿಗೆ ಸಮನ್ವಯತೆ ಸಾಧಿಸಿ ಮುಂದಡಿ ಇಡುವುದೊಳಿತು ಎಂದು ಸಲಹೆಯಿತ್ತರು. ತಲಕಾವೇರಿ - ಭಾಗಮಂಡಲದ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಜಿಲ್ಲಾಮಟ್ಟದಲ್ಲಿ ಸಮಿತಿಯೊಂದನ್ನು ರಚಿಸು ವಂತಾಗಬೇಕು. ಪ್ರಾಮಾಣಿಕವಾಗಿ ತೊಡಗಿಸಿಕೊಂಡು ಕೆಲಸ ಮಾಡುವವರಿಗೆ ಸಮಿತಿಯಲ್ಲಿ ಅವಕಾಶ ನೀಡಬೇಕು. ಧಾರ್ಮಿಕ ಕ್ಷೇತ್ರಗಳಿಗೆ ಸೂಕ್ತ ಭದ್ರತೆ ಒದಗಿಸುವಂತಾಗಬೇಕು. ಕಾವೇರಿ ಕ್ಷೇತ್ರದಲ್ಲಿ ಅನಧಿಕೃತ ರೆಸಾರ್ಟ್ವೊಂದು ತಲೆ ಎತ್ತಿದ್ದು, ಈ ಬಗ್ಗೆ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಲಕಾವೇರಿ ಮೂಲ ಸ್ವರೂಪ ರಕ್ಷಣಾ ವೇದಿಕೆ ಸದಸ್ಯ ರತನ್ ತಮ್ಮಯ್ಯ ಮಾತನಾಡಿ, ಕಾವೇರಿ ಕ್ಷೇತ್ರವನ್ನು ಪ್ರವಾಸೋದ್ಯಮ ಪಟ್ಟಿಯಿಂದ ತೆಗೆಯಬೇಕು. ದೇವಸ್ಥಾನಗಳ ನಗರಿ ಎಂದು ಘೋಷಿಸಬೇಕೆಂದರು.

ಯುನೈಟೆಡ್ ಕೊಡವ ಅರ್ಗನೈಜೇಷನ್ ಅಧ್ಯಕ್ಷ ಮಂಜು ಚಿಣ್ಣಪ್ಪ ಮಾತನಾಡಿ, ತಲಕಾವೇರಿ - ಭಾಗಮಂಡಲ ಭಕ್ತರ ಭಾವನಾತ್ಮಕ ಕೇಂದ್ರವಾಗಿದ್ದು, ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಡುವ ಮೂಲಕ ತಜ್ಞರ ಸಮಿತಿ ರಚನೆ ಮಾಡಿ ಕಾವೇರಿ ಕ್ಷೇತ್ರವನ್ನು ದೇವಸ್ಥಾನಗಳ ನಗರಿಯಾಗಿ ಘೋಷಿಸಲು ಮುಂದಾಗಬೇಕು ಎಂದು ಹೇಳಿದರು.

ಕೊಡಗು ರಕ್ಷಣಾ ವೇದಿಕೆ ಪ್ರಮುಖ ಪವನ್ ಪೆಮ್ಮಯ್ಯ ಮಾತನಾಡಿ ಭಗಂಡೇಶ್ವರ ದೇವಾಲಯ ಹಿಂಭಾಗದಲ್ಲಿ ಇರುವ ರೆಸಾರ್ಟ್ನ್ನು ಮುಚ್ಚಿಸಬೇಕು. ದೇವಸ್ಥಾನಗಳ ನಗರಿ ಯೋಜನೆಯ ಬಗ್ಗೆ ಸ್ಥಳೀಯರಿಗೆ ಮನದಟ್ಟು ಮಾಡಿಸುವ ಕೆಲಸವಾಗಬೇಕೆಂದರು.

ತಿರಿಬೊಳ್‌ಚ ಕೊಡವ ಸಂಘದ ಅಧ್ಯಕ್ಷೆ ಡಾಟಿ ಪೂವಯ್ಯ ಮಾತನಾಡಿ, ಕಟ್ಟುನಿಟ್ಟಿನ ವ್ರತದೊಂದಿಗೆ ಶ್ರದ್ಧಾಭಕ್ತಿಯಿಂದ ಕಾವೇರಿ ಕ್ಷೇತ್ರಕ್ಕೆ ತೆರಳುವ ಭಕ್ತರಿಗೆ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಕ್ಷೇತ್ರದ ವ್ಯವಸ್ಥೆ ಹಾಳಾಗಿದೆ. ಆದ್ದರಿಂದ ಅವೆಲ್ಲವನ್ನು ಸರಿಪಡಿಸುವ ನಿಟ್ಟಿನಲ್ಲಿ ದೇವಸ್ಥಾನಗಳ ನಗರಿ ಎಂದು ಘೋಷಣೆಯಾಗಬೇಕೆಂದರು.

ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಪ್ರವೀಣ್ ಉತ್ತಪ್ಪ ಮಾತನಾಡಿ, ಕಾವೇರಿ ಕ್ಷೇತ್ರ ಪ್ರವಾಸಿ ತಾಣವಲ್ಲ ಎಂಬುದನ್ನು ಮೊದಲು ಎಲ್ಲರಿಗೂ ಮನವರಿಕೆ ಮಾಡುವ ಕೆಲಸವಾಗಬೇಕು. ಕಾವೇರಿ ಕ್ಷೇತ್ರ ಭಕ್ತರ ಶ್ರದ್ಧಾಭಕ್ತಿಯ ಕೇಂದ್ರವಾಗಿ ಮಾರ್ಪಾಡಾಗಬೇಕು. ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಒತ್ತು ಕೊಡುವ ಕೆಲಸವಾಗಬೇಕೆಂದರು.

ಪೊನ್ನAಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ಇತರ ಪುಣ್ಯಕ್ಷೇತ್ರಗಳಂತೆ ಕಾವೇರಿ ಕ್ಷೇತ್ರದಲ್ಲೂ ಕಟ್ಟುನಿಟ್ಟಿನ ನಿಯಮಗಳು ಜಾರಿಯಾಗಬೇಕು. ಕಾವೇರಿ ಕ್ಷೇತ್ರಕ್ಕೆ ಒಳಿತಾದರೆ ಜಿಲ್ಲೆಗೂ ಒಳಿತಾಗುತ್ತದೆ ಎಂದು ನುಡಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಮಾಚಿಮಾಡ ರವೀಂದ್ರ ಮಾತನಾಡಿ, ಕಾವೇರಿಯಂತಹ ಪವಿತ್ರವಾದ ಸ್ಥಳವನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ. ಸ್ಥಳೀಯರ ಅಭಿಪ್ರಾಯಕ್ಕೆ ಒತ್ತುಕೊಟ್ಟು ಮುಂದಿನ ಹೆಜ್ಜೆ ಇಡುವಂತಾಗಬೇಕೆAದರು.

ಮಡಿಕೇರಿ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಮಾದೇಟಿರ ಬೆಳ್ಯಪ್ಪ ಮಾತನಾಡಿ ಕಾವೇರಿ ಕ್ಷೇತ್ರ ಸಂರಕ್ಷಣೆ ಸಂಬAಧ ಎಲ್ಲರನ್ನು ಒಳಗೊಂಡು ಸಮನ್ವಯ ಸಭೆ ಕರೆದು ಎಲ್ಲರೊಂದಿಗೂ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವಂತಾಗಬೇಕೆAದರು.

ಕೊಡವಾಮೆರ ಕೊಂಡಾಟ ಸಂಘಟನೆ ಪ್ರಮುಖ ಚಾಮೇರ ದಿನೇಶ್ ಮಾತನಾಡಿ, ಭಾಗಮಂಡಲದಿAದ ತಲಕಾವೇರಿವರೆಗೆ ಕಾವೇರಿ ಕ್ಷೇತ್ರದ ಬಗ್ಗೆ ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾಮಫಲಕಗಳನ್ನು ಅಳವಡಿಸ ಬೇಕೆಂದರು.

ಹೋAಸ್ಟೇ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಮೋಂತಿಗಣೇಶ್ ಮಾತನಾಡಿ, ಕಾವೇರಿ ಕ್ಷೇತ್ರಕ್ಕೆ ಬರುವವರು ಎಲ್ಲೆಂದರಲ್ಲಿ ಅಡುಗೆ ಮಾಡುವುದನ್ನು ನಿಷೇಧಿಸಬೇಕು. ಪ್ರವಾಸಿಗರಿಗೆ ಕ್ಷೇತ್ರದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದರು.

ಕೊಡಗು ಬೆಳೆಗಾರರ ಒಕ್ಕೂಟದ ಕಾರ್ಯದರ್ಶಿ ಹರೀಶ್ ಮಾದಪ್ಪ ಮಾತನಾಡಿ, ಭಾಗಮಂಡಲದ ಭಕ್ತರಿಗೆ ವಾಹನ ಶುಲ್ಕ ವಿಧಿಸಬಾರದು. ವ್ಯವಸ್ಥಾಪನಾ ಸಮಿತಿಯಲ್ಲಿ ಸ್ಥಳೀಯರಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಹೇಳಿದರು. ಕಾವೇರಿ ಕ್ಷೇತ್ರದಲ್ಲಿ ಹೋಂಮೇಡ್ ವೈನ್ ಮಾರಾಟ ನಿಲ್ಲಿಸಬೇಕು. ಭದ್ರತೆ ಹೆಚ್ಚಿಸಬೇಕು ಎಂಬಿತ್ಯಾದಿ ಕುರಿತು ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಸೂರಜ್ ಸೋಮಯ್ಯ, ಅಮಿತ್, ಸುನಿಲ್ ಇವರುಗಳು ಕಾವೇರಿ ಪಾವಿತ್ರö್ಯತೆ ಸಂರಕ್ಷಣೆ ಸಂಬAಧ ತಮ್ಮ ಸಲಹೆಗಳನ್ನು ನೀಡಿದರು.

ವೇದಿಕೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ತಲಕಾವೇರಿ - ಭಾಗಮಂಡಲ ದೇವಾಲಯ ಕಾರ್ಯ ನಿರ್ವಾಹಕಾಧಿಕಾರಿ ಕೃಷ್ಣಪ್ಪ, ಪಾರುಪತ್ತೆಗಾರರಾದ ಪೊನ್ನಣ್ಣ ಉಪತಸ್ಥಿತರಿದ್ದರು. ಸಭೆಯಲ್ಲಿ ಇನ್ನು ಇತರ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು.