ಮಡಿಕೇರಿ, ಜ. ೫: ಹೊಸ ವರ್ಷದ ಪ್ರಯುಕ್ತ ಚೆಟ್ಟಿಮಾನಿ ಬ್ಲೂ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಳೇ ತಾಲೂಕು ಅಟೇರ‍್ಸ್ ಪ್ರಥಮ ಸ್ಥಾನ ಮತ್ತು ಡೆಕ್ಕನ್ ನಾಪೋಕ್ಲು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಚೆಟ್ಟಿಮಾನಿ ಶಾಲಾ ಆಟದ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ೨೦ ತಂಡಗಳು ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭದಲ್ಲಿ ಕುಂದಚೇರಿ (ಚೆಟ್ಟಿಮಾನಿ) ಪಂಚಾಯಿತಿ ಸದಸ್ಯ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗಮಂಡಲ ಪಂಚಾಯಿತಿ ಉಪಾಧ್ಯಕ್ಷ, ಕಾವೇರಿ ವಿದ್ಯಾಸಂಘ ಅಧ್ಯಕ್ಷ ಸತೀಶ್ ಜೋಯಪ್ಪ ಮಾತನಾಡಿ ಯುವ ಜನಾಂಗದ ಜವಾಬ್ದಾರಿ ಬಗ್ಗೆ ಮಡಿಕೇರಿ, ಜ. ೫: ಹೊಸ ವರ್ಷದ ಪ್ರಯುಕ್ತ ಚೆಟ್ಟಿಮಾನಿ ಬ್ಲೂ ಸ್ಟಾರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಹಳೇ ತಾಲೂಕು ಅಟೇರ‍್ಸ್ ಪ್ರಥಮ ಸ್ಥಾನ ಮತ್ತು ಡೆಕ್ಕನ್ ನಾಪೋಕ್ಲು ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಚೆಟ್ಟಿಮಾನಿ ಶಾಲಾ ಆಟದ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ೨೦ ತಂಡಗಳು ಪಾಲ್ಗೊಂಡಿದ್ದವು. ಸಮಾರೋಪ ಸಮಾರಂಭದಲ್ಲಿ ಕುಂದಚೇರಿ (ಚೆಟ್ಟಿಮಾನಿ) ಪಂಚಾಯಿತಿ ಸದಸ್ಯ ಹರೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗಮಂಡಲ ಪಂಚಾಯಿತಿ ಉಪಾಧ್ಯಕ್ಷ, ಕಾವೇರಿ ವಿದ್ಯಾಸಂಘ ಅಧ್ಯಕ್ಷ ಸತೀಶ್ ಜೋಯಪ್ಪ ಮಾತನಾಡಿ ಯುವ ಜನಾಂಗದ ಜವಾಬ್ದಾರಿ ಬಗ್ಗೆ ಅಯ್ಯಂಗೇರಿ ಪಂಚಾಯ್ತಿ ಅಧ್ಯಕ್ಷ ಕುಯ್ಯಮುಡಿ ರಂಜು, ಬೆಳೆಗಾರ ಜಗದೀಶ್ ಸೋಮಯ್ಯ, ಗುತ್ತಿಗೆದಾರರು ಹಾಗೂ ದಾನಿಗಳಾದ ಕೆ.ಎ.ಉಸ್ಮಾನ್, ಟಿ.ಎಂ.ಸಾದುಲಿ ಹಾಜರಿದ್ದರು. ಸಿ.ಕೆ.ಫೈಸಲ್ ನಿರೂಪಿಸಿ, ಸುಹೇಬ್ ವಂದಿಸಿದರು.