ಮಡಿಕೇರಿ, ಜ. ೫: ಮಡಿಕೇರಿಯ ಕೊಡವ ವಿದ್ಯಾನಿಧಿ ವತಿಯಿಂದ ತಾ. ೮ ರಂದು ನಿಗದಿಯಾಗಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಚೆಕ್ ವಿತರಣೆ ಕಾರ್ಯಕ್ರಮವನ್ನು ಕಾರಣಾಂತರಗಳಿAದ ಮುಂದೂಡಲಾಗಿದೆ.

ತಾ. ೨೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕೊಡವ ಸಮಾಜ ಕಲ್ಯಾಣ ಮಂಟಪದಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. ವಿದ್ಯಾರ್ಥಿ ವೇತನ ಮಂಜೂರಾಗಿ ದೂರವಾಣಿ ಮುಖಾಂತರ ಸೂಚಿಸಿರುವ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಬಂದು ಚೆಕ್ ಪಡೆದುಕೊಳ್ಳಬೇಕಾಗಿ ಕೊಡವ ವಿದ್ಯಾನಿಧಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.