ಮಡಿಕೇರಿ, ಜ. ೫: ಮೂರ್ನಾಡು ವಿದ್ಯಾಸಂಸ್ಥೆಗೆ ಇಲ್ಲಿನ ಸ್ಥಳೀಯರಾದ ಕೋಟೆರ ಕುಂಞಪ್ಪ ಅವರು ಸುಮಾರು ರೂ. ೧೫ ಸಾವಿರ ಬೆಲೆಬಾಳುವ ಕಳೆ ಕೊಚ್ಚುವ ಯಂತ್ರವನ್ನು ಕೊಡುಗೆ ನೀಡಿದರು. ಅಧ್ಯಕ್ಷ ಬಾಚೆಟೀರ ಜಿ. ಮಾದಪ್ಪ, ಕಾರ್ಯದರ್ಶಿ ಪೆಮ್ಮಡಿಯಂಡ ವೇಣು ಅಪ್ಪಣ್ಣ, ವಿವಿಧ ವಿಭಾಗದ ಮುಖ್ಯಸ್ಥರು ಹಾಗೂ ಶಿಕ್ಷಕ ವೃಂದದವರ ಸಮ್ಮುಖದಲ್ಲಿ ವಿದ್ಯಾಸಂಸ್ಥೆಗೆ ಕೊಡುಗೆ ನೀಡಿದರು.