ಕುಶಾಲನಗರ, ಜ. ೫: ರಾಮನಗರದಲ್ಲಿ ನಡೆದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾಡಪ್ರಭು ಕೆಂಪೇಗೌಡರ ಪುತ್ಥಳಿ ಅನಾವರಣ ಕಾರ್ಯಕ್ರಮ ದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರ ವರ್ತನೆ ಖಂಡಿಸಿ ಸೋಮವಾರಪೇಟೆ ಮಂಡಲ ಬಿಜೆಪಿ ಕಾರ್ಯಕರ್ತರು ಕುಶಾಲನಗರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ತಾಲೂಕು ಮಂಡಲದ ಅಧ್ಯಕ್ಷ ಮನುಕುಮಾರ್ ರೈ ನೇತೃತ್ವದಲ್ಲಿ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಸಂಸದ ಡಿ.ಕೆ. ಸುರೇಶ್, ಎಂಎಲ್ಸಿ ರವಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಬಿಜೆಪಿ ಉಸ್ತುವಾರಿ ಬಿ.ಬಿ. ಭಾರತೀಶ್, ತಾಲೂಕು ಅಧ್ಯಕ್ಷ ಮನುಕುಮಾರ್ ರೈ, ತಾಲೂಕು ಮಂಡಲದ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಕುಶಾಲನಗರ ಘಟಕದ ಅಧ್ಯಕ್ಷ ಉಮಾಶಂಕರ್, ಉಪಾಧ್ಯಕ್ಷ ಹೆಚ್.ಡಿ. ಶಿವರಾಜಿರಾವ್, ವಕ್ತಾರ ಕೆ.ಜಿ. ಮನು, ಕುಡಾ ಅಧ್ಯಕ್ಷ ಎಂ.ಎA. ಚರಣ್, ಸಹಕಾರ ಸಂಘದ ನಿರ್ದೇಶಕ ಹೆಚ್.ಎಂ. ಮಧುಸೂದನ್, ಮುಖಂಡರಾದ ಕುಮಾರಪ್ಪ, ಬೋಸ್ ಮೊಣ್ಣಪ್ಪ, ಮೋಕ್ಷಿಕ್, ಗೌತಮ್, ಇಂದಿರಾ ರಮೇಶ್, ಚಂದ್ರಶೇಖರ್, ಪುಷ್ಪ ನಾಗೇಶ್, ಪದ್ಮನಾಭ, ಮೋಹಿತ್, ಜ್ಯೋತಿ ಶಿವಣ್ಣ, ರುದ್ರಾಂಬಿಕೆ, ನಿರ್ಮಲಾ ಪಾಲ್ಗೊಂಡಿದ್ದರು.