ಕೂಡಿಗೆ, ಜ. ೪: ತೊರೆನೂರು ಗ್ರಾಮದ ಒಕ್ಕಲಿಗರ ಸಂಘದ ವತಿಯಿಂದ ಸಂಘದ ವಾರ್ಷಿಕ ಮಹಾಸಭೆಯ ಅಂಗವಾಗಿ ಕುವೆಂಪು ಜನ್ಮ ದಿನಾಚರಣೆ ಮತ್ತು ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ತೊರೆನೂರು ಗ್ರಾಮದ ಶನಿದೇವರ ದೇವಾಲಯ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಟಿ.ಪಿ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್. ಕೃಷ್ಣೆಗೌಡ ನೆರವೇರಿಸಿ ಮಾತಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಇಂತಹ ಸಂಘಟನೆಗಳು ಇರುವುದರಿಂದ ಗ್ರಾಮದಲ್ಲಿ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲ, ಮತ್ತು ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳ ಗುರುತಿಸು ವಿಕೆಗೆ ಪೂರಕವಾಗುವುದು. ಜೊತೆಗೆ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಒಗ್ಗೂಡಲು ಸಹಕಾರಿಯಾಗುವುದು ಎಂದರು. ಕುವೆಂಪು ಅವರ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾನ್ವಿತ ಶಾಲಾ ವಿದ್ಯಾರ್ಥಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು. ಈ ಸಂದರ್ಭ ಟಿ.ಎಲ್. ಮಹೇಶ್ ಕುಮಾರ್, ಕಾರ್ಯದರ್ಶಿ ಎ.ಎನ್. ರಮೇಶ್, ನಿರ್ದೇಶಕರಾದ ಕೆ.ಎಸ್. ಕೃಷ್ಣೆಗೌಡ, ಟಿ.ಟಿ. ಪ್ರಕಾಶ್, ವಿ.ಟಿ. ದೇವರಾಜ್, ಎ.ಕೆ. ದಿನೇಶ್ ಟಿ.ಟಿ. ಗೋವಿಂದ, ಟಿ.ಕೆ. ವೆಂಕಟೇಶ ಹೆಚ್.ಎ. ರಮೇಶ್, ಕುಸುಮ ರಾಮೇಗೌಡ, ಗ್ರಾಮದ ಮುಖಂಡ ರಾದ ವಿ.ಟಿ. ನಾರಾಯಣ, ಟಿ.ಪಿ. ಪುಟ್ಟರಾಜ್ ಟಿ.ಕೆ. ರವಿ ಮಂಜುನಾಥ ಜನಾರ್ಧನ್ ಹಾಜರಿದ್ದರು. ರಮೇಶ್ ಸ್ವಾಗತಿಸಿ, ವಂದಿಸಿದರು.