ಗೋಣಿಕೊಪ್ಪಲು, ಜ. ೫: ಗಡಿ ಭಾಗವಾದ ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಬಿಲ್‌ಕಲೆಕ್ಟರ್ ಮಹೇಶ್ ಹಾಗೂ ಅಟೆಂಡರ್ ರಾಜನ್ ಸೇರಿ ಸಾರ್ವಜನಿಕರ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತಾಲೂಕು ಮಟ್ಟದ ಅಧಿಕಾರಿಗಳು ಕಳೆದೆರಡು ದಿನಗಳಿಂದ ನಡೆಸುತ್ತಿದ್ದ ತನಿಖೆ ಮುಕ್ತಾಯಗೊಳಿಸಿದ್ದಾರೆ.

ಎರಡು ದಿನದ ತನಿಖೆಯಲ್ಲಿ ನಾಗರಿಕರು ನೀಡಿದ ನೂರಕ್ಕೂ ಅಧಿಕ ರಶೀದಿಗಳಲ್ಲಿ ಮೋಸ ಮಾಡಿರುವುದು ದೃಢÀಪಟ್ಟಿದೆೆ.

(ಮೊದಲ ಪುಟದಿಂದ) ತಾ.ಪಂ. ಲೆಕ್ಕ ಅಧಿಕಾರಿ, ಲೆಕ್ಕ ಸಹಾಯಕರು ಹಾಗೂ ಆಡಳಿತ ಸಿಬ್ಬಂದಿ ಪಂಚಾಯಿತಿ ಮೂವರು ತನಿಖೆ ಮುಗಿಸಿದ್ದು ಅಂತಿಮ ವರದಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೂರು ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಅಧಿಕಾರಿಗಳು ಪಂಚಾಯಿತಿಯ ರಶೀದಿ ಪುಸ್ತಕ, ಡಿಮಾಂಡ್ ರಿಜಿಸ್ಟರ್, ಡೈಲಿ ಪುಸ್ತಕವನ್ನು ತನಿಖೆಯ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ.

- ಹೆಚ್.ಕೆ. ಜಗದೀಶ್