ಕುಶಾಲನಗರ, ಜ.೩ : ಕುಶಾಲನಗರದ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ೨೭ನೇ ವರ್ಷದ ಪಂಪಾ ದೀಪೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಸ್ಥಳೀಯ ಗೆಳೆಯರ ಬಳಗ ಆಶ್ರಯದಲ್ಲಿ ನಡೆದ ಪೂಜೋತ್ಸವ ಅಂಗವಾಗಿ ದೇವಾಲಯವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ದೇವಾಲಯದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಮತ್ತು ಭಕ್ತ ವೃಂದದಿAದ ಪಂಪಾ ದೀಪ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಾಲಯದೊಳಗೆ ಮಂಟಪ ಪ್ರದಕ್ಷಿಣೆ ಬಳಿಕ ಪಂಪಾ ದೀಪ ಮಂಟಪ ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಮೂರ್ತಿಯನ್ನು ಕಾವೇರಿ ನದಿಗೆ ಮಂಗಳವಾದ್ಯ ಜೊತೆಗೆ ಮದ್ದುಗುಂಡುಗಳ ಸಿಡಿಸುವುದರೊಂದಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.

ಕಾವೇರಿ ನದಿಯಲ್ಲಿ ಅಯ್ಯಪ್ಪಸ್ವಾಮಿ ಉತ್ಸವ ಮೂರ್ತಿಯ ತೀರ್ಥಸ್ಥಾನ ಬಳಿಕ ಮಂಟಪವನ್ನು ನದಿಯಲ್ಲಿ ಬಿಡಲಾಯಿತು. ಪಡಿಪೂಜೆ, ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಅರ್ಚಕರಾದ ಕೃಷ್ಣಮೂರ್ತಿ ಭಟ್, ಸೋಮಶೇಖರ್ ಭಟ್, ವಿಷ್ಣುಮೂರ್ತಿ ಭಟ್ ಪೂಜಾ ವಿಧಿ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ, ಪಪಂ ಸದಸ್ಯ ಹಾಗೂ ಗೆಳೆಯರ ಬಳಗದ ಪ್ರಮುಖರಾದ ವಿ.ಎಸ್.ಆನಂದಕುಮಾರ್, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ಗಣಪತಿ ಹಾಗೂ ಲಕ್ಷಿö್ಮ ದೇವರಿಗೆ ಪಂಚಾಮೃತ ಅಭಿಷೇಕ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕೊರೊನಾ ಸಂಪೂರ್ಣ ನಿರ್ಮೂಲನೆಯಾಗಲೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.

ಅಯ್ಯಪ್ಪ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಪ್ರಮುಖರು, ಗೆಳೆಯರ ಬಳಗದ ಪ್ರಮುಖರಾದ ರಾಖಿ, ಎಚ್.ಎಂ.ಚAದ್ರು, ರಾಜೇಶ್, ವಸಂತ್, ನರೇಂದ್ರ, ರವಿ, ಕೃಷ್ಣೋಜಿರಾವ್, ಗಿರೀಶ್, ಜಗದೀಶ್, ಸದಾ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.