ವೀರಾಜಪೇಟೆ, ಜ. ೩: ಇತ್ತೀಚೆಗೆ ಅಗಲಿದ ಖ್ಯಾತ ಸಾಹಿತಿ ಹಾಗೂ ನಿವೃತ್ತ ಶಿಕ್ಷಕಿ ಮುಲ್ಲೇಂಗಡ ಬೇಬಿ ಚೋಂದಮ್ಮ ಅವರಿಗೆ ನುಡಿ ನಮನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಇವರ ಹೆಸರಿನಲ್ಲಿ ದತ್ತಿನಿಧಿ ಸಮರ್ಪಣಾ ಕಾರ್ಯಕ್ರಮ ವೀರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭ ಮೃತರ ಕುಟುಂಬದಿAದ ದತ್ತಿನಿಧಿ ಸ್ವೀಕರಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ ತನ್ನ ಅಧಿಕಾರಾವಧಿಯಲ್ಲಿ ಇದು ಮೊದಲ ದತ್ತಿನಿಧಿಯಾಗಿದ್ದು, ಇಂತಹ ದತ್ತಿನಿಧಿಗಳು ಅಗಲಿದ ವ್ಯಕ್ತಿಗಳನ್ನು ಜೀವಂತವಾಗಿಸುತ್ತದೆ ಎಂದರು. ಮೃತರ ಹೆಸರಿನಲ್ಲಿ ನೀಡಲಾಗುವ ದತ್ತಿಯ ಹಣದ ಬಡ್ಡಿಯಿಂದ ವರ್ಷಂಪ್ರತಿ ಅವರ ಹೆಸರಿನಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ, ಇತರರು ಕೂಡ ದತ್ತಿನಿಧಿಯನ್ನು ನೀಡಲು ಮುಂದೆ ಬರಬೇಕಿದೆ ಎಂದರು. ಬೇಬಿ ಚೋಂದಮ್ಮ ಅವರು ಬದುಕಿದ್ದಾಗ ಒಬ್ಬ ಶಿಕ್ಷಕಿಯಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡುವುದರ ಮೂಲಕ ಸಾರ್ಥಕತೆ ಮೆರೆದರು. ಅವರು ಸತ್ತಮೇಲೆ ಕೂಡ ಅವರ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನ ಮಾಡುವ ಮೂಲಕ ಇಲ್ಲಿಯೂ ಕೂಡ ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿದ್ದಾರೆ. ಹಾಗೇ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅಂಧರಿಗೆ ಬೆಳಕಾಗಿದ್ದಾರೆ, ಜೀವನದ ಸಾರ್ಥಕತೆ ಎಂದರೆ ಇದೆ ಎಂದು ಜೋಂದಮ್ಮ ಅವರ ಗುಣಗಾನ ಮಾಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಾಹಿತಿ ಮೊಣ್ಣಂಡ ಶೋಭ ಸುಬ್ಬಯ್ಯ ಕವನ ವಾಚಿಸುವುದರ ಮೂಲಕ ಬೇಬಿ ಚೋಂದಮ್ಮ ಹಾಗೂ ತಮ್ಮ ನಡುವಿನ ಬಾಲ್ಯದ ನೆನಪುಗಳನ್ನು ಹಂಚಿಕೊAಡರು, ಮತ್ತೋರ್ವ ಸಾಹಿತಿ ಕಿಗ್ಗಾಲು ಗಿರೀಶ್, ಮನೆಮನೆ ಕವಿಗೋಷ್ಠಿ ಸಂಚಾಲಕ ವೈಲೇಶ್ ಹಾಗೂ ಸಾಹಿತಿ ಕಸ್ತೂರಿ ಗೋವಿಂದಮಯ್ಯ ಕವನ ವಾಚಿಸಿ ಮಾತನಾಡಿದರು.
ಈ ಸಂದರ್ಭ ಉಪಸ್ಥಿತರಿದ್ದ ಬೇಬಿ ಚೋಂದಮ್ಮ ಅವರ ಮಗ ಮುಲ್ಲೇಂಗಡ ಮಧೋಶ್ ಪೂವಯ್ಯ ಹಾಗೂ ಪತಿ ಶಂಕರಿ ಪೊನ್ನಪ್ಪ ದತ್ತಿನಿಧಿಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಆಪಾಡಂಡ ಧನು ದೇವಯ್ಯ ಹಾಗೂ ನಾ ಕನ್ನಡಿಗ ಟಾಮಿ ಥೋಮಸ್ ಹಾಡಿನ ಮೂಲಕ ರಂಜಿಸಿದರು. ಆಯ್ದ ಕವಿಗಳಿಂದ ಕವಿಗೋಷ್ಠಿ ಕಾರ್ಯಕ್ರಮ ಕೂಡ ನಡೆಯಿತು. ಈ ಸಂದರ್ಭ ಬೇಬಿ ಚೋಂದಮ್ಮ ಆಸೆಯಂತೆ ಅವರು ಮೃತರಾದ ಸಂದರ್ಭ ನಡುರಾತ್ರಿ ಒಂದು ಗಂಟೆಗೆ ಅವರ ಮನೆಗೆ ತೆರಳಿ ಬೇಬಿ ಚೋಂದಮ್ಮ ಅವರ ಕಣ್ಣುಗಳನ್ನು ಶಸ್ತçಚಿಕಿತ್ಸೆ ಮೂಲಕ ತೆಗೆದು ಸಂರಕ್ಷಿಸಿದ ವೀರಾಜಪೇಟೆಯ ಡಾಕ್ಟರ್ ಹೇಮಾಪ್ರಿಯಾ ಅವರನ್ನು ಕುಟುಂಬ ವರ್ಗದಿಂದ ಸನ್ಮಾನಿಸಲಾಯಿತು. ಮಧೋಶ್ ಪೂವಯ್ಯ ಸ್ವಾಗತಿಸಿ ವಂದಿಸಿದರೆ ಮುಲ್ಲೇಂಗಡ ರೇವತಿ ಪೂವಯ್ಯ ಪ್ರಾರ್ಥಿಸಿದರು.