ಸುಂಟಿಕೊಪ್ಪ, ಜ.೨: ಯೋಧ ನಮನಂ ಶ್ರದ್ಧಾಂಜಲಿ ರಥಯಾತ್ರೆಗೆ ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಗ್ರಾ.ಪಂ., ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಾಗತಕೋರಿ ಬರಮಾಡಿಕೊಂಡರು.

ಸುAಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕೆÀ್ಷ ಶಿವಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಸದಸ್ಯರುಗಳು, ಸಾರ್ವಜನಿಕ ಸಂಘ ಸಂಸ್ಥೆಗಳವರು, ಸರಕಾರಿ ಇಲಾಖೆಯ ನೌಕರರು, ನಿವೃತ್ತ ಸೈನಿಕರು ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ಶಾಲಾ - ಕಾಲೇಜು ವಿದ್ಯಾರ್ಥಿಗಳು ರಥಕ್ಕೆ ಪುಷ್ಪಾರ್ಚನೆಗೈದರು.

ರಥಯಾತ್ರೆಯನ್ನು ಉದ್ದೇಶಿಸಿ ಕೆ.ಜಿ.ಶಿವನ್ ಮಾತನಾಡಿದರು. ಸುಂಟಿಕೊಪ್ಪದಲ್ಲಿ ರಥಯಾತ್ರೆಯ ಜವಾಬ್ಧಾರಿಯನ್ನು ಗ್ರಾ.ಪಂ.ಸದಸ್ಯರಾದ ಪಿ.ಆರ್.ಸುನಿಲ್, ಬ್ಲೂಬಾಯ್ಸ್ ಯುವಕ ಸಂಘದ ಕಾರ್ಯದರ್ಶಿ ಬಿ.ಕೆ. ಪ್ರಶಾಂತ್, ಕಸಾಪ ಹೋಬಳಿ ಮಾಜಿ ಅಧ್ಯಕ್ಷ ಎಂ.ಎಸ್.ಸುನಿಲ್ ನಿರ್ವಹಿಸಿದರು.

ಸುಂಟಿಕೊಪ್ಪಕ್ಕೂ ಮೊದಲು ಗುಡ್ಡೆಹೊಸೂರಿನಿಂದ ೭ನೇ ಹೊಸಕೋಟೆಗೆ ಆಗಮಿಸಿದ ರಥಯಾತ್ರೆಯನ್ನು ೭ನೇ ಹೊಸಕೋಟೆಯ ಜೈಜವಾನ್ ನಿವೃತ ಸೈನಿಕರ ಟ್ರಸ್ಟ್ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು. ಮೆಟ್ನಳ್ಳ ಸೇತುವೆ ಬಳಿ ರಥಕ್ಕೆ ಮಾಲಾರ್ಪಣೆ ಮಾಡಿ ಘೋಷಣೆಗಳನ್ನು ಕೂಗುತ್ತ ೭ನೇ ಹೊಸಕೋಟೆಯ ಸರಕಾರಿ ಪ್ರಾಥಮಿಕ ಶಾಲಾವರಣಕ್ಕೆ ರಥವನ್ನು ಬರಮಾಡಿಕೊಳ್ಳಲಾಯಿತು ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಪಿ.ರಮೇಶ್ ಜೈಜವಾನ್ ನಿವೃತ್ತ ಸೈನಿಕರ ಟ್ರಸ್ಟ್ನ ಅಧ್ಯಕ್ಷ ಸಿ.ಜಿ.ಶ್ರೀನಿವಾಸ್, ಕಾರ್ಯದರ್ಶಿ ಕೆ.ಜಿ.ಶಿವನ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾದ ಖಾನ್, ದೀಪ್ತಿ ಶಾಲೆಯ ದಾಸ್ ಸೇರಿದಂತೆ ಸಾರ್ವಜನಿಕರು ಮಹಿಳೆಯರು ಮಕ್ಕಳು ರಥಕ್ಕೆ ಪುಷ್ಪಾರ್ಚನೆಗೈದು ನಮಿಸಿದರು.

ಕೊಡಗರಹಳ್ಳಿ ವೃತ್ತದಲ್ಲಿ ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಮಕ್ಕಳು ಮತ್ತು ಅದ್ಯಾಪಕ ವೃಂದ ಶಾಲಾ ಆಡಳಿತ ಮಂಡಳಿಯ ಸದಸ್ಯರು ನೇತಾಜಿ ಯುವಕ ಸಂಘದ ಪದಾಧಿಕಾರಿ ಮತ್ತು ಸದಸ್ಯರು ಶ್ರೀ ಬೈತೂರಪ್ಪ ಪೊವ್ವದಿ ಟ್ರಸ್ಟ್ನ ಸದಸ್ಯರುಗಳು ಪುಷ್ಪಾರ್ಚನೆ ಗೈದು ಗೌರವ ಸಲ್ಲಿಸಿದರು.