ಮಡಿಕೇರಿ, ಜ. ೩: ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಇಗ್ಗುತ್ತಪ್ಪ ಕ್ಷೇತ್ರಗಳನ್ನು ದೇವಸ್ಥಾನಗಳ ನಗರಿ (ಟೆಂಪನ್ ಟೌನ್) ಎಂದು ಪರಿವರ್ತಿಸಬೇಕೆಂಬ ಬೇಡಿಕೆ ಸಂಬAಧ ತಾ. ೫ ರಂದು ಸಭೆ ನಡೆಯಲಿದೆ.

ಕ್ಷೇತ್ರದಲ್ಲಿ ಧಾರ್ಮಿಕ ಪರಂಪರೆ, ನಂಬಿಕೆ, ಆಚರಣೆಗಳಿಗೆ ಹೊಂದಿಕೆಯಾಗುವAತೆ ಕೆಲವು ಧಾರ್ಮಿಕ ಬೇಡಿಕೆಗಳಿಗೆ ಪರಿಹಾರ ಒದಗಿಸಿಕೊಂಡಲು ಸಂಘಟನೆಗಳು ಮನವಿ ಮಾಡಿಕೊಂಡಿದೆ. ಈ ಕುರಿತು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಾ. ೫ ರಂದು ಪೂರ್ವಾಹ್ನ ೧೦ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದ್ದಾರೆ.