ವೀರಾಜಪೇಟೆ, ಜ. ೨: ವೀರಾಜಪೇಟೆ ತಾಲೂಕಿನ ನಲ್ವತ್ತೊಕ್ಲು ಗ್ರಾಮದ ಕೃಷಿಕರಾದ ಸಿ.ಪಿ.ಕಾವೇರಪ್ಪ ಅವರು ಒಂದೂವರೆ ಎಕರೆ ಜಾಗದಲ್ಲಿ ಬೆಳೆದಿದ್ದ ಬಾಳೆ ಬೆಳೆಯನ್ನು ಕಾಡಾನೆಗಳು ದಾಳಿ ನಡೆಸಿ ನಾಶಪಡಿಸಿವೆ. ಇದರಿಂದ ರೂ,೫೦ ಸಾವಿರ ನಷ್ಟ ಸಂಭವಿಸಿರುವುದರಿAದ ಸರಕಾರ ಅರಣ್ಯ ಇಲಾಖೆ ಪರಿಹಾರ ನೀಡುವಂತೆ ವೀರಾಜಪೇಟೆ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.