ಪಾಲಿಬೆಟ್ಟ, ಜ. ೨: ಭಾರತದ ಕಾಫಿನಾಡು ಎಂಬ ಹೆಗ್ಗಳಿಕೆಯ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶವಾದ ಅಂದಿನ ಪೊಳ್ಳೆಬೆಟ್ಟ (ಇಂದಿನ ಪಾಲಿಬೆಟ್ಟ) ಗ್ರಾಮದಲ್ಲಿ ಹಿರಿಯರು ಸೇರಿ ೧೯೨೧ ರಲ್ಲಿ ಆರಂಭಿಸಿದ ಸಹಕಾರ ಸಂಘ ಇಂದು ಶತಮಾನೋತ್ಸವ ಸಂಭ್ರಮದಲ್ಲಿದೆ.
೧೯೩೬-೩೭ ನೇ ವರ್ಷದಲ್ಲಿ ಕೂತಂಡ ಜೋಯಪ್ಪ ಸಂಘದ ಅಧ್ಯಕ್ಷರಾಗಿದ್ದರು. ೧೯೩೮-೩೯ ರ ಸಂದರ್ಭ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ೪೫ ಸದಸ್ಯರಿದ್ದರು. ಮೇಜ ಪುಲಿಯಂಡ ಮಾದಪ್ಪ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ೧೯೪೫-೪೬ ರಲ್ಲಿ ಪಿ.ಸಿ. ಮಾದಪ್ಪ ಅಧ್ಯಕ್ಷರಾಗಿದ್ದ ಸಂದರ್ಭ ಸಂಘದ ಸದಸ್ಯರ ಸಂಖ್ಯೆ ೭೨ ಕ್ಕೇರಿತು.
೧೯೪೬ ರಲ್ಲಿ ಸಂಘವು ಬೆಳ್ಳಿಮಹೋತ್ಸವವನ್ನು ಆಚರಿಸಿದ ಸಂದರ್ಭ ಪಿ.ಸಿ. ಮಾದಪ್ಪ ಸಂಘದ ಅಧ್ಯಕ್ಷರಾಗಿದ್ದು ಪಾಲು ಬಂಡವಾಳ ೧೩೪೭ ರೂಪಾಯಿಗಳಾಗಿತ್ತು. ಸಂಘದ ಲಾಭಾಂಶ ಆಗ ೧೩೫ ರೂಪಾಯಿಗಳಾಗಿತ್ತು. ೧೯೫೦-೧೯೫೧ ರಲ್ಲಿ ಪುಲಿಯಂಡ ಉತ್ತಯ್ಯ ಅಧ್ಯಕ್ಷರಾಗಿದ್ದ ಸಂದರ್ಭ ಪೊಳ್ಳೆಬೆಟ್ಟ ನಿಯಮಿತ ಸಂಘವಾಗಿ ಇದ್ದ ಹೆಸರನ್ನು ವಿವಿಧೋದ್ದೇಶ ನಿಯಮಿತ ಜವಬ್ದಾರಿ ಸಂಘವೆAದು ತಿದ್ದುಪಡಿ ಮಾಡಲಾಯಿತು.
೧೯೬೮-೧೯೬೯ ರಲ್ಲಿ ಸಂಘಕ್ಕೆ ಮಹತ್ವದ ವರ್ಷ. ಪುಲಿಯಂಡ ಯಂ ಪೊನ್ನಪ್ಪ ಅಧ್ಯಕ್ಷರಾಗಿದ್ದ ಈ ಸಂದರ್ಭ ೧೫.೧೨.೧೯೬೮ ರಂದು ಸಂಘದ ಸ್ವಂತ ನಿವೇಶನದಲ್ಲಿ ನೂತನ ಕಟ್ಟಡವನ್ನು ಪಿಎಂ ಉತ್ತಪ್ಪ ಉದ್ಘಾಟಿಸಿದರು. ಸಂಘದ ವ್ಯವಹಾರವನ್ನು ಭತ್ತ ಖರೀದಿ ಹಾಗೂ ಗೊಬ್ಬರ ಮಾರಾಟ ಮಾಡುವ ಮುಖಾಂತರ ಕೆಲವು ಸದಸ್ಯರ ಸೇರ್ಪಡೆಯೊಂದಿಗೆ ಪ್ರಾರಂಭಿಸಲಾಯಿತು. ಪಾಲಿಬೆಟ್ಟ ಸೇವಾ ಸಹಕಾರ ಸಂಘದ ೫೦ ನೇ ವರ್ಷವನ್ನು ಪುಲಿಯಂಡ ಎಂ. ಪೊನ್ನಪ್ಪ ಅಧ್ಯಕ್ಷರಾಗಿದ್ದ ಸಂದರ್ಭ ೧೯೭೧ ರಲ್ಲಿ ಆಚರಿಸಲಾಯಿತು. ಆಗ ಸಂಘದ ಸದಸ್ಯರ ಸಂಖ್ಯೆ ೨೪೦.
ಕರ್ನಾಟಕ ಸರಕಾರದ ಗೆಜೆಟ್‌ನ ೧೧೧-೨ ನಂ ೪೦೯೦ ದಿನಾಂಕ ೧೮-೦೯-೧೯೭೬ ರ ಪ್ರಕಾರ ಪಾಲಿಬೆಟ್ಟ ಸೇವಾ ಸಹಕಾರ ಸಂಘದ ಜೊತೆಗೆ ಹೊಸೂರು ಸೇವಾ ಸಂಘವನ್ನು ಸಂಯೋಜಿಸಿ ಹೊಸ ಹೆಸರಾಗಿ ರಿಜಿಸ್ಟರ್ ನಂ ಡಿ. ಅರ್ ೨/೯/೨೮೦೪ ಎಂದು ಕೊಡಲಾಯಿತು. ಪಾಲಿಬೆಟ್ಟ ವ್ಯವಸಾಯ ಸೇವಾ ಸಹಕಾರ ಸಂಘ ಎಂದು ಇದಕ್ಕೆ ನಾಮಕರಣ ಮಾಡಲಾಯಿತು. ೧೯೮೮ ರ ನವಂಬರ್ ೧೦ ರಂದು ಈ ಸಂಘದ ನೂತನ ಕಟ್ಟಡವನ್ನು ಕೊಡಗು ಜಿಲ್ಲಾ ಪರಿಷತ್‌ನ ಅಧ್ಯಕ್ಷರಾಗಿದ್ದ ಜೆ.ಎ ಕರುಂಬಯ್ಯ ಮತ್ತು ಬ್ಯಾಂಕಿನ ಕೌಂಟರ್ ಅನ್ನು ಎಂ.ಸಿ ನಾಣಯ್ಯ ಉದ್ಘಾಟಿಸಿದ್ದರು.
೭೫ನೇ ವರ್ಷ
೧೯೯೫ರಲ್ಲಿ ಸಂಘದ ೭೫ ವರ್ಷಾಚರಣೆಯ ಸ್ಮರಣೆಗಾಗಿ ೧೯೯೫ ರ ಫೆಬ್ರವರಿ ೨೬ ರಂದು ಸಂಘದ ನೂತನ ವ್ಯಾಪಾರ ಮಳಿಗೆ ಹಾಗೂ ಗೋದಾಮು ಉದ್ಘಾಟನೆಯನ್ನು ಹಿರಿಯ ಸಹಕಾರಿ ಧುರೀಣ ಎಂ.ಸಿ. ನಾಣಯ್ಯ ನೆರವೇರಿಸಿದ್ದರು. ಸಂಘದ ಸದಸ್ಯರಿಗೆ ಹಾಗೂ ಪಾಲಿಬೆಟ್ಟ ಸುತ್ತಮುತ್ತಲಿನ ಗ್ರಾಹಕರಿಗೆ ಹತ್ಯಾರು, ಗೊಬ್ಬರ, ಕಬ್ಬಿಣ, ಕ್ರಿಮಿನಾಶಕ, ಹೆಂಚು, ಸೀಮೆಂಟ್ ಮಾರಾಟ ಮಾಡಲು ಪ್ರಾರಂಭಿಸಿ ಈವರೆಗೆ ಉತ್ತಮ ಗುಣಮಟ್ಟದ ಸರಕುಗಳನ್ನು ಮಾರಾಟ ಮಾಡುತ್ತ ಬರಲಾಗಿದೆ.
೨೦೦೪ ರ ಮಾರ್ಚ್ ೨ ರಂದು ಸಂಘದಲ್ಲಿ ನಿರ್ಮಿಸಲಾದ ನೂತನ ಸಭಾಂಗಣವನ್ನು ಹಿರಿಯ ಸಹಕಾರಿಗಳಾದ ಎಂ.ಸಿ. ನಾಣಯ್ಯ ಉದ್ಘಾಟಿಸಿದರು. ಈ ಸಭಾಂಗಣ ಈಗಲೂ ಸಂಘದ ವಾರ್ಷಿಕ ಸಭೆ , ಇತರೆ ಸಭೆ ಸಮಾರಂಭಗಳಿಗೆ ಬಳಕೆಯಾಗುತ್ತಿದೆ.
೨೦೦೭ ರ ಅಕ್ಟೋಬರ್ ೨೬ ರಂದು ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಅಂದಿನ ಅಧ್ಯಕ್ಷ ಕೆ.ಟಿ. ಕಾರ್ಯಪ್ಪ ಉದ್ಘಾಟಿಸಿದ್ದರು. ಬ್ಯಾಂಕ್ ಕಟ್ಟಡವನ್ನು ಎಂ.ಸಿ. ನಾಣಯ್ಯ , ಬ್ಯಾಂಕ್ ಕೌಂಟರ್ ಮತ್ತು ಕಂಪ್ಯೂಟರ್ ಉದ್ಘಾಟನೆಯನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಎಂ.ಎ. ರಮೇಶ್ ಹಾಗೂ ಬ್ಯಾಂಕ್ ಭದ್ರತಾ ಕೊಠಡಿ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕರಾಗಿದ್ದ ಎ ಶಾಂತು ಅಪ್ಪಯ್ಯ ಅವರು, ಬ್ಯಾಂಕ್ ಸೇಫ್ ಡಿಪಾಸಿಟರ್ ಲಾಕರ್ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎ.ಸಿ. ದಿವಾಕರ್ ನೆರವೇರಿಸಿದ್ದರು.
೨೦೦೭ ರಿಂದ ನೂತನ ಬ್ಯಾಂಕಿAಗ್ ಹಾಗೂ ಕಂಪ್ಯೂಟರ್ ಸೇವೆ ಪ್ರಾರಂಭಗೊAಡು ಸದಸ್ಯರಿಗೆ ಹಾಗೂ ಸಂಘದ ಗ್ರಾಹಕರಿಗೆ ಅತ್ಯಾಧುನಿಕ ಬ್ಯಾಂಕಿAಗ್ ಸೇವೆಯನ್ನು ನೀಡುತ್ತಾ ಬರಲಾಗಿದೆ.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯವ್ಯಾಪ್ತಿಯಾಗಿದ್ದ ಚೆನ್ನಯ್ಯನಕೋಟೆಯಲ್ಲಿ ಸಂಘದ ಸದಸ್ಯರ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಸಂಘದ ಶಾಖೆಯನ್ನು ೨೦೧೦ ರ ಜನವರಿ ೨೭ ರಂದು ಪ್ರಾರಂಭಿಸಲಾಯಿತು. ಶಾಖೆಯಲ್ಲಿ ಬ್ಯಾಂಕಿAಗ್ ವಿಭಾಗ ಮತ್ತು ಮಾರಾಟ ವಿಭಾಗ ಪಡಿತರ ಸಾಮಗ್ರಿಗಳ ವಿಭಾಗವನ್ನು ಪ್ರಾರಂಭಿಸಲಾಯಿತು.
೨೦೧೯-೨೦ ನೇ ವರ್ಷದಲ್ಲಿ ಚನ್ನಂಗಿ ಗ್ರಾಮದಲ್ಲಿ ಕೂಡ ಸಂಘದ ಶಾಖೆಯನ್ನು ಪ್ರಾರಂಭಿಸಿ ಪಡಿತರ ಸಾಮಗ್ರಿಗಳ ಮಾರಾಟವನ್ನು ಜನರ ಅನುಕೂಲಕ್ಕಾಗಿ ಪ್ರಾರಂಭಿಸಲಾಯಿತು. ಮೂಕೊಂಡ ವಿಜು ಸುಬ್ರಮಣಿ ೧೦ ವರ್ಷಗಳ ಕಾಲ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ಈ ಸಂದರ್ಭ ಸಂಘದ ಸಿಬ್ಬಂದಿಗಳಿಗೆ ವಸತಿಗೃಹ ಕೂಡ ನಿರ್ಮಾಣವಾಯಿತು.
೨೦೨೧ನೇ ವರ್ಷ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶತಮಾನೋತ್ಸವದ ಸಂಭ್ರಮ. ಈ ಮಹತ್ವದ ಕಾಲಘಟ್ಟದಲ್ಲಿ ಅಜ್ಜನಿಕಂಡ ಶ್ಯಾಂಚAದ್ರ ಅಧ್ಯಕ್ಷರಾಗಿದ್ದು ಕೊಲ್ಲೀರ ಧರ್ಮಜ ಉಪಾಧ್ಯಕ್ಷರಾಗಿ ಶಶಿಕಲ ಮುಖ್ಯP Áರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಘವು ಪ್ರಸ್ತುತ ೧೦೦೧ ಸದಸ್ಯರನ್ನು ಹೊಂದಿದೆ. ಶತಮಾನೋತ್ಸವ ವರ್ಷದಲ್ಲಿ ೩೪ ಕೋಟಿ ೯೦ ಲಕ್ಷ ರೂಪಾಯಿ ದುಡಿಯುವ ಬಂಡವಾಳ ಹೊಂದಿದ್ದು ೧೨೪ ಕೋಟಿ ೩೧ ಲಕ್ಷ ರೂಪಾಯಿ ವ್ಯವಹಾರ ನಡೆಸಿ ೧ ಕೋಟಿ .೨೦ ಲಕ್ಷ ರೂಪಾಯಿ ಪಾಲು ಬಂಡವಾಳ, ಕ್ಷೇಮನಿಧಿ - ೨ ಕೋಟಿ ೫೪ ಲಕ್ಷ , ಇತರೆ ನಿಧಿ ೧ ಕೋಟಿ ೫೫ ಲಕ್ಷ ರೂ. ಗಳನ್ನು ಹೊಂದಿದೆ. ಶತಮಾನೋತ್ಸವ ಸಮಾರಂಭ ತಾ. ೩ ರಂದು (ಇಂದು) ಪಾಲಿಬೆಟ್ಟದ ಅನುಗ್ರಹ ಸಭಾಂಗಣದಲ್ಲಿ ನಡೆಯಲಿದೆ.
ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘ ಎಂಬುದು ಸದಸ್ಯರ ಪಾಲಿಗೆ ಕುಟುಂಬದAತೆ ಇಲ್ಲಿನ ಸಿಬ್ಬಂದಿಗಳು, ನಿರ್ದೇಶಕರ ಸೇವೆ ಉತ್ತಮವಾಗಿದೆ. ಎಂಬ ಗ್ರಾಹಕರ ಪ್ರಶಂಸೆಯೇ ಸಂಘದ ಸಾಧನೆಗಳಿಗೆ ಸ್ಫೂರ್ತಿಯಾಗಿದೆ ಎನ್ನುತ್ತಾರೆ ಸಂಘದ ಶತಮಾನೋತ್ಸವ ವರ್ಷದ ಅಧ್ಯಕ್ಷ ಅಜ್ಜನಿಕಂಡ ಶ್ಯಾಂಚAದ್ರ.
- ವರದಿ : ಪುತ್ತಂ ಪ್ರದೀಪ್