ಮಡಿಕೇರಿ, ಜ. ೨: ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟ್ ಉದ್ಯಾನವನದಲ್ಲಿರುವ ಸಂಗೀತ ಕಾರಂಜಿಯಲ್ಲಿ ಇನ್ನು ಮುಂದೆ ‘ಎವರ್ ಗ್ರೀನ್ ಕೊಡವ ವಾಲಗ’ವೂ ಜನತೆಯನ್ನು ಆಕರ್ಷಿಸಲಿದೆ. ಸಂಗೀತ ಕಾರಂಜಿಯಲ್ಲಿ ಒಳಗೊಂಡಿರುವ ಕನ್ನಡ ನಾಡಿನ ಜೀವನದಿ ಕಾವೇರಿ, ಬಾರಿಸು ಕನ್ನಡ ಡಿಂಡಿಮವ, ಟಿಪ್ ಟಿಪ್ ಬರ್ಸಾ ಪಾನಿ ಮತ್ತಿತರ ಹಾಡಿನೊಂದಿಗೆ ಇದೀಗ ವಾಲಗದ ನಿನಾದವೂ ಪ್ರಮುಖ ಆಕರ್ಷಣೆ ಪಡೆಯಲಿದೆ.

(ಮೊದಲ ಪುಟದಿಂದ) ಕೊಯಮತ್ತೂರಿನ ತಂತ್ರಜ್ಞರು ಇದನ್ನು ಅಳವಡಿಸುವ ಕೆಲಸ ನಿರ್ವಹಿಸುತ್ತಿದ್ದು, ಕಾರಂಜಿಯನ್ನು ಉನ್ನತೀಕರಿಸುವ ಪ್ರಯತ್ನ ನಡೆಯುತ್ತಿದೆ. ಇದೀಗ ಟ್ರಯಲ್ ರೀತಿಯಲ್ಲಿ ಇದನ್ನು ಪ್ರಾರಂಭಿಸಲಾಗಿದೆ ಎಂದು ತೋಟಗಾರಿಕಾ ಇಲಾಖಾ ಪ್ರಭಾರ ಉಪನಿರ್ದೇಶಕ ಚೆಕ್ಕೇರ ಪ್ರಮೋದ್ ತಿಳಿಸಿದರು. ಮುಂದಿನ ವಾರದಲ್ಲಿ ಇದು ಅಂತಿಮವಾಗಲಿದ್ದು, ಕೊಡಗಿಗೆ ಬರುವ ಪ್ರವಾಸಿಗರಿಗೆ ವಾಲಗದ ನಿನಾದದ ನಡುವೆ ಪುಟಿಯುವ ಸಂಗೀತ ಕಾರಂಜಿಯ ಆಕರ್ಷಣೆ ಸಿಗಲಿದೆ.