ಮಡಿಕೇರಿ, ಜ.೨ : ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅನುಮೋದಿಸಿರುವ ಜಿಲ್ಲಾ ಕಾಂಗ್ರೆಸ್ನ ನೂತನ ಪದಾಧಿಕಾರಿಗಳ ಹೆಸರುಗಳನ್ನು ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಅವರು ಘೋಷಿಸಿದ್ದಾರೆ.
ಜಿಲ್ಲಾ ಕಾರ್ಯಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲೇ ಪಕ್ಷ ಸಂಘಟನೆಯಾಗಲಿದ್ದು, ಉಪಾಧ್ಯಕ್ಷರುಗಳಾಗಿ ಕೆ.ಎಂ.ಲೋಕೇಶ್, ಸುಜು ತಿಮ್ಮಯ್ಯ, ಅಬ್ದುಲ್ ರೆಹಮಾನ್, ಪಾಪು ಸಣ್ಣಯ್ಯ, ಫಿಲೋಮಿನಾ, ಸರ ಚಂಗಪ್ಪ, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಐ.ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್, ಕುಸುಮಾ ಜೋಯಪ್ಪ, ಪಂಕಜ, ಕಾಂತರಾಜ್, ಸಂಜಯ್ ಜೀವಿಜಯ, ವಿ.ಕೆ.ಸತೀಶ್, ಗೌರವ ಕಾರ್ಯದರ್ಶಿಯಾಗಿ ವಿ.ಪಿ.ಸುರೇಶ್ ಹಾಗೂ ಖಜಾಂಚಿಯಾಗಿ ಶೈಕ್ ಖಲೀಂ ಉಲ್ಲಾ ನೇಮಕಗೊಂಡಿದ್ದಾರೆ.
ಕಾರ್ಯದರ್ಶಿಗಳಾಗಿ ಕೋದಂಡ ಸೋಮಣ್ಣ, ಸುಂದರ್, ಭರತ್ ಮುತ್ತಪ್ಪ, ಶರತ್ ಶೇಖರ್, ಎಸ್.ಎಂ.ಡಿಸಿಲ್ವಾ, ಮೋಹನ್ ದಾಸ್, ಜೆ.ಎಎಲ್.ಜನಾರ್ಧನ್, ಶ್ರೀಜಾ ಸಾಜಿ ಅಚ್ಚುತನ್, ಕಾರ್ಯಕಾರಿ ಸದಸ್ಯರುಗಳಾಗಿ ಪೊರೇರ ಬಿದ್ದಪ್ಪ, ಬೆಲ್ಲು ಬೋಪಯ್ಯ, ಸಿ.ಜೆ.ವಿಶುರಂಜಿ, ಅಬ್ದುಲ್ ರೆಹಮಾನ್ ಬಾಪು, ವಿನಯ್ ಕುಮಾರ್, ಸಂದೀಪ್ ಮುಕ್ಕಾಟಿರ, ಅಬ್ದುಲ್ ಮಜೀದ್, ಕಾವೇರಮ್ಮ, ಕಿರಣ್, ಬಾಚಮಂಡ ಲವ, ಬೊಳ್ಳಂಡ ಶರಿ ಗಿರೀಶ್, ಸುಮಿತಾ ಬಿದ್ದಪ್ಪ, ಶಾಫಿ ಎಡಪಾಲ, ಚಂದ್ರಶೇಖರ್ ಶಿರಂಗಾಲ, ಬಾಲಕೃಷ್ಣ ರೈ, ಅಬ್ದುಲ್ ಖಾದರ್ ಕುಶಾಲನಗರ, ಬಾಲಚಂದ್ರ ನಾಯರ್, ಆದಂ, ಮುಂಡAಡ ಬಾಗೇಶ್, ಕೆ.ಸಿ.ಮೋಹನ್ರಾಜ್, ಅಬ್ದುಲ್ ರಜಾಕ್, ಲೋಕನಾಥ್, ಕೃಷ್ಣ ಕಂಬಿಬಾಣೆ, ಪ್ರಕಾಶ್, ಹೂವಯ್ಯ, ಪುಷ್ಪಲತಾ, ಶಾಜಿ ಕುಶಾಲನಗರ, ಗಂಗಾಧರ್ ಆಯ್ಕೆಯಾಗಿದ್ದಾರೆ.
ಖಾಯಂ ಆಹ್ವಾನಿತ ಸದಸ್ಯರುಗಳಾಗಿ ಜಯಮ್ಮ, ರಾಜಾ ಕುಶಾಲಪ್ಪ, ಶಕೂರ್ ಸಿದ್ದಾಪುರ, ಸಿ.ಎ.ರವಿ, ಕೆ.ಎಸ್.ಬೋಪಣ್ಣ, ಮೊಯ್ದು ಬೇಟೋಳಿ, ಹಾರಿಸ್ ಚೆಟ್ಟಿಮಾನಿ, ಖಾಲಿದ್ ಹಾಕತ್ತೂರು, ಚುಮ್ಮಿ ದೇವಯ್ಯ, ಶಮೀರ್ ಗೋಣಿಕೊಪ್ಪ, ಸಿ.ಡಿ.ಇಬ್ರಾಹಿಂ, ವೆಂಕಟೇಶ್ ಮಡಿಕೇರಿ, ಲಾರೆನ್ಸ್, ರಾಜಮ್ಮ ರುದ್ರಾಯ, ಟಿ.ಎಂ.ಅಯ್ಯಪ್ಪ, ಜಯರಾಜ್, ಜುಲೇಕಾಬಿ, ಪುಷ್ಪಾ ಪೂಣಚ್ಚ, ಮಣಿ ಅಯ್ಯಮ್ಮ, ಮೂಸ ಸಿದ್ದಾಪುರ, ವಿಶೇಷ ಆಹ್ವಾನಿತರಾಗಿ ಶಿವು ಮಾದಪ್ಪ, ಎಸ್.ಎಂ.ಚAಗಪ್ಪ, ಪೆಮ್ಮಂಡ ಪೊನ್ನಪ್ಪ, ಮನುಮೇದಪ್ಪ, ದೇವಲಿಂಗಯ್ಯ, ಎರ್ಮು ಹಾಜಿ, ನಂದಕುಮಾರ್ ಸೋಮವಾರಪೇಟೆ, ಕೆ.ಎಂ.ಸುಬ್ರಮಣಿ, ಶ್ಯಾಂ ಜೋಸೆಫ್, ಬೊಳ್ಳಚೆಟ್ಟೀರ ಸುರೇಶ್ ಅಜಿತ್ ಅಯ್ಯಪ್ಪ, ಕೆ.ಕೆ.ನಟರಾಜ, ಎಸ್.ಕೆ.ವೀರಪ್ಪ, ಹೆಚ್.ಪಿ.ನಾಗಪ್ಪ, ಹೆಚ್.ಬಿ.ಶೇಷಾದ್ರಿ, ಹೆಚ್.ಸಿ.ನಾಗೇಶ್ ಹಾಗೂ ಸಾಬು ತಿಮ್ಮಯ್ಯ ನೇಮಕಗೊಂಡಿದ್ದಾರೆ.
ಪಕ್ಷ ಸಂಘಟನೆಯ ಕುರಿತು ವಿಶ್ವಾಸ ವ್ಯಕ್ತಪಡಿಸಿರುವ ಧರ್ಮಜ ಉತ್ತಪ್ಪ, ಜಿ.ಪಂ, ತಾ.ಪಂ ಮತ್ತು ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಸದಸ್ಯರು ವಿಶೇಷ ಆಹ್ವಾನಿತರಾಗಿರುತ್ತಾರೆ. ಜಿ.ಪಂ ಹಾಗೂ ತಾ.ಪಂ ಚುನಾವಣೆ ಮುಗಿದ ನಂತರ ನೂತನ ಪದಾಧಿಕಾರಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.