ಮಡಿಕೇರಿ, ಡಿ. ೩೧: ಶ್ರೀ ರಾಮಲಿಂಗ ಚೌಡೇಶ್ವರಿ ದೇವಾಂಗ ಮಹಿಳಾ ಸಮಾಜದ ೨೭ನೇ ವರ್ಷದ ವಾರ್ಷಿಕೋತ್ಸವವು ಇತ್ತೀಚೆಗೆ ಆಚರಿಸಲಾಯಿತು.

ಸತ್ಯನಾರಾಯಣ ಪೂಜೆ ಮತ್ತು ಭೋಜನ ಸೇವಾರ್ಥದಾರರಾಗಿ ಕಲ್ಪನಾ ನಾಗೇಶ್ ಅವರು ವಹಿಸಿಕೊಂಡಿದ್ದರು. ಪೂಜೆಯ ನಂತರ ಕುಲಬಾಂಧವರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಎಂಎಸ್‌ಸಿ, ಎಂಬಿಎ, ಎಂಡಿಎಸ್, ಪಿಹೆಚ್‌ಡಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಬಿಇ, ಎಂ.ಟೆಕ್‌ನಲ್ಲಿ ಡಾಕ್ಟರೇಟ್ ಪಡೆದ ಡಾ|| ಪೂಜಾ ಕೆಂಚೆಟ್ಟಿಯವರನ್ನು ಹಾಗೂ ಬಿಡಿಎಸ್, ಎಂಡಿಎಸ್, ಐಎಜಿಇ ಯಲ್ಲಿ ಸಾಧನೆ ಮಾಡಿದ ಡಾ|| ವರ್ಷಾರವಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರ ಪರಿಚಯ ವನ್ನು ಪದ್ಮಾಮೋಹನ್ ಮತ್ತು ಜಯಶ್ರೀ ನಾಗೇಶ್‌ಗವಿ ಅವರು ಮಾಡಿಕೊಟ್ಟರು.

ಬಾಲಪ್ರತಿಭೆಗಳಾದ ತನ್ಮಯಿ ಡಿ. ಮಹೇಶ್ ಬ್ರೆöÊನೋಬ್ರೇನ್‌ನಲ್ಲಿ ಚಿನ್ನದ ಪದಕ, ರಾಜ್ಯಪಾಲ ಬುಲ್ ಬುಲ್ ಪ್ರಶಸ್ತಿ ಪಡೆದ ಕಾವೇರಿ ಅನಿಲ್ ಕುಮಾರ್ ಅವರನ್ನು ಗೌರವಿಸ ಲಾಯಿತು. ಇವರ ಪರಿಚಯವನ್ನು ನಂದಿನಿ ಗಣೇಶ್ ಹಾಗೂ ವಿದ್ಯಾದೇವರಾಜ್ ಮಾಡಿದರು.

ಸಭೆಯ ಅಧ್ಯಕ್ಷತೆಯನ್ನು ಪದ್ಮಾ ಮೋಹನ್ ವಹಿಸಿದ್ದರು. ಭಾಗ್ಯಪ್ರತಾಪ್ ನಿರೂಪಣೆ, ಭಾರತಿ ಸುಬ್ರಮಣ್ಯ ಸ್ವಾಗತಿಸಿ, ಲಕ್ಷಿö್ಮಮೋಹನ್, ಪೂರ್ಣಿಮಾ ಜಗದೀಶ್ ವಂದಿಸಿ ದರು. ಲಲಿತಾ ಸುರೇಶ್, ಸರೋಜ ರಾಜು, ಮನೋನ್ಮಣಿ, ನಿರ್ಮಲ ದಿವಾಕರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.