ಶನಿವಾರಸಂತೆ, ಡಿ. ೩೧: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿರಿಕೊಡ್ಲಿ ಗ್ರಾಮದ ಗೃಹಿಣಿ ಪವಿತ್ರ್ರ (೩೧) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ನಡೆದಿದೆ. ಕಿರಿಕೊಡ್ಲಿ ಗ್ರಾಮದ ಕಾರ್ಮಿಕ ಬಾಲಸುಬ್ರಮಣಿ ಅವರ ಪತ್ನಿ ಪವಿತ್ರ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಆಸ್ಪತ್ರೆ ಔಷಧಿ ಹಾಗೂ ನಾಟಿ ಔಷಧಿ ಕೊಡಿಸಿದರೂ ಗುಣಮುಖರಾಗಿರಲಿಲ್ಲ. ಇದೇ ವಿಚಾರವಾಗಿ ಕೊರಗುತ್ತಿದ್ದರು ಎನ್ನಲಾಗಿದೆ.
ಪವಿತ್ರ್ರ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು ಮನೆಯ ಮಲಗುವ ಕೋಣೆಯಲ್ಲಿ ಚೂಡಿದಾರ್ ವೇಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಪೊಲೀಸ್ ಇನ್ಸ್ಪೆಕ್ಟರ್ ಪರಶಿವಮೂರ್ತಿ ಹಾಗೂ ಎಎಸ್ಐ ಎಚ್.ಎಸ್. ಚೆನ್ನಯ್ಯ ಭೇಟಿ ನೀಡಿ ಪರಿಶೀಲಿಸಿದರು. ಮೃತ ಪವಿತ್ರ್ರರ ತಾಯಿ ಪಾರ್ವತಿ ದೂರು ನೀಡಿದ್ದು ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.