ಶನಿವಾರಸಂತೆ, ಡಿ. ೩೧: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಕೊಳವೆ ಬಾವಿಯೊಂದು ಇದ್ದು ಇದೀಗ ಕೆಟ್ಟು ನಿಂತಿದೆ. ಇದರಿಂದ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಕೊಳವೆ ಬಾವಿಯಿಂದ ಪಕ್ಕದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಶಾಲೆಗೆ ನೀರು ಸರಬರಾಜಾಗುತ್ತದೆ. ಕೊಳವೆ ಬಾವಿ ಕೆಟ್ಟು ನಿಂತಿರುವ ಕಾರಣ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ, ಶಾಲೆಗಳ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತೊಂದರೆಯಾಗಿದೆ ಎಂದು ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ಪರದಾಡುವಂತಾಗಿದೆ. ಕೊಳವೆ ಬಾವಿ ಸಮರ್ಪಕವಾಗಿ ದುರಸ್ತಿಯಾಗದೆ ಆಗಾಗ್ಗೆ ಕೆಟ್ಟು ಹೋಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು, ಸಂಬAಧಪಟ್ಟ ಅಧಿಕಾರಿಗಳು ಮತ್ತೊಂದು ಕೊಳವೆ ಬಾವಿ ಸೌಲಭ್ಯವನ್ನು ಶೀಘ್ರ ಒದಗಿಸಿ ಕೊಡಲಿ ಎಂದು ನಾಗರಿಕರು ಆಗ್ರಹಿಸಿದ್ದಾರೆ.