ಸಿದ್ದಾಪುರ, ಡಿ. ೩೦ : ಸಾಮಾಜಿಕ ಜಾಲತಾಣ ಹಾಗೂ ದುಶ್ಚಟಗಳಿಗೆ ಬಲಿಯಾಗುತ್ತಿರುವ ಯುವ ಸಮೂಹಕ್ಕೆ ಒಳಿತಿನ ಮಾರ್ಗದರ್ಶನ ಅತ್ಯಗತ್ಯವಾಗಿದ್ದು ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯ ರೂಪಿಸಲು ಮುಂದಾಗಬೇಕೆAದು ಗ್ಲೋಬಲ್ ಪಲ್ಸ್ ಫೌಂಡೇಶನ್ ನಿರ್ದೇಶಕ ಸಲೀಂ ಪಯ್ಯೋಳಿ ಸಲಹೆ ನೀಡಿದರು.
ಕರ್ನಾಟಕ ಸುನ್ನೀ ಸ್ಟೂಡೆಂಟ್ ಫೆಡರೇಶನ್ನ ಹುಂಡಿ ಎಸ್ಎಸ್ಎಫ್ ವಲಯ ಸಮಿತಿ ವತಿಯಿಂದ ಜುಮಾ ಮಸೀದಿ ಆವರಣದಲ್ಲಿ ಆಯೋಜಿಸಲಾಗಿದ್ದ ‘ವಾಟ್ ಈಸ್ ರಿಯಲ್ ಹ್ಯಾಪಿನೆಸ್’ ಎಂಬ ಭವಿಷ್ಯದ ಚಿಂತನ ಮಂಥನ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕಾದ ಯುವ ಸಮೂಹ ಸಾಮಾಜಿಕ ಜಾಲತಾಣ ಹಾಗೂ ಮಾದಕ ವ್ಯಸನಿಗಳೊಂದಿಗೆ ದುಶ್ಚಟಗಳಿಗೆ ಹೆಚ್ಚು ಬಲಿಯಾಗುತ್ತಿದ್ದು ಯುವ ಸಮೂಹವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಒಳಿತಿನ ಮಾರ್ಗದರ್ಶನ ಅಗತ್ಯವಾಗಿದೆ ಎಂದರು.
ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಮೀರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ದುಶ್ಚಟಗಳಿಂದ ದೂರ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಹುಂಡಿ ಎಸ್ಸೆಸ್ಸೆಫ್ ವಲಯ ಸಮಿತಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮಹಲ್ ಅಧ್ಯಕ್ಷ ಮಹಮ್ಮದ್ ಹಾಜಿ, ಮಸೀದಿ ಖತಿಬ್ ನೌಶಾದ್' ಸಮಿತಿಯ ಅಧ್ಯಕ್ಷ ಸೈಫುದ್ದೀನ್, ಕಾರ್ಯದರ್ಶಿ ಉನೈಸ್, ಸಹ ಕಾರ್ಯದರ್ಶಿ ಸಫೀಕ್,ಎಸ್ಸೆಸ್ಸೆಫ್ ವಲಯ ಅಧ್ಯಕ್ಷ ಹ್ಯಾರಿಸ್, ಎಸ್ವೈಎಸ್ ಅಧ್ಯಕ್ಷ ಮುಸ್ತಫಾ ಸಖಾಫಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು