ಮಡಿಕೇರಿ, ಡಿ. ೩೦: ಓಮಿಕ್ರಾನ್ ಸೋಂಕಿನ ಭೀತಿ ಹಿನ್ನೆಲೆ ಸರಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಮೂಡಿರುವ ಗೊಂದಲದ ಬಗ್ಗೆ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ತಾ. ೨೬ ರಂದು ವೈರಾಣು ಸೋಂಕು ನಿಯಂತ್ರಿಸಲು ರಾಜ್ಯ ಕಾರ್ಯಕಾರಿ ಸಮಿತಿ ಕೆಲವೊಂದು ಆದೇಶ ಹೊರಡಿಸಿತ್ತು. ಇದರಲ್ಲಿ ರೆಸ್ಟೋರೆಂಟ್, ಹೋಟೇಲ್, ಪಬ್ ಹಾಗೂ ಕ್ಲಬ್ಗಳು ಕೋವಿಡ್ ಸಮುಚಿತ ವರ್ತನೆಗಳನ್ನು ಕಡ್ಡಾಯವಾಗಿ ಷರತ್ತಿಗೊಳಪಟ್ಟು ಆಸನ ಸಾಮಾರ್ಥ್ಯದ ಶೇ.೫೦ ರಷ್ಟು ಮಾತ್ರ ಕಾರ್ಯಚರಿಸುವುದು ಎಂದು ಉಲ್ಲೇಖಿಸಲಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜ್ಯ ಸರಕಾರ, ಈ ಹಿಂದೆ ಹೊರಡಿಸಿದ್ದ ಆದೇಶ ಆಹಾರ ಮತ್ತು ಪಾನೀಯ ಬಡಿಸುವಂತಹ ಹೊಟೇಲ್ಗಳಿಗೆ ಮಾತ್ರ ಅನ್ವಯಿಸುತ್ತದೆ. ಹೊಟೇಲ್ಗಳ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಸಾಮಾರ್ಥ್ಯಕ್ಕೆ ಅನುಗುಣವಾಗಿ ಕೊಠಡಿಗಳಲ್ಲಿ ಆತಿಥ್ಯ ಕಲ್ಪಿಸಬಹುದು ಎಂದು ಸ್ಪಷ್ಟೀಕರಣ ನೀಡಿದೆ.