ಕೂಡಿಗೆ, ಡಿ. ೩೦: ಲೋಕೋಪಯೋಗಿ ಇಲಾಖೆಯ ವತಿಯಿಂದ ಉದ್ದೇಶಿಸಿರುವ ಹಾಸನ ಹೆದ್ದಾರಿಯ ಮುಳ್ಳುಸೋಗೆಯಿಂದ ಕೂಡ್ಲೂರು ಗ್ರಾಮದ ತಿರುವಿನವರೆಗೆ ರಸ್ತೆಯ ಅಗಲೀಕರಣ ಕಾಮಗಾರಿ ಆರಂಭಗೊAಡಿದೆ. ಮಳೆ ಇದ್ದ ಹಿನ್ನೆಲೆ ಎರಡು ಕೋಟಿ ವೆಚ್ಚದ ರಸ್ತೆಯ ಅಗಲೀಕರಣದ ಕಾಮಗಾರಿ ಸ್ಥಗಿತಗೊಂಡಿತ್ತು, ಇದೀಗ ಮಳೆ ತಗ್ಗಿದ ಕಾರಣ ಕಾಮಗಾರಿ ಆರಂಭಗೊAಡಿದೆ.