ಪೊನ್ನAಪೇಟೆ, ಡಿ. ೩೦. ಮಂಗಳೂರು ವಿಶ್ವ ವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ, ಹಾಕಿ ಕೂರ್ಗ್ ನ ಸಹಕಾರ ದೊಂದಿಗೆ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ೪ ತಂಡಗಳು ಲೀಗ್ ಹಂತಕ್ಕೆ ಪ್ರವೇಶ ಪಡೆದು ಕೊಂಡವು.
ಮಂಗಳೂರು ಯೂನಿವರ್ಸಿಟಿ, ತಿರುವಳ್ಳುವರ್ ಯೂನಿವರ್ಸಿಟಿ ವಿರುದ್ಧ ೯-೦ ಗೋಲುಗಳ ಅಂತರ ದಿಂದ ಜಯ ಪಡೆಯಿತು. ವಿಜೇತ ತಂಡದ ಪರ ಅಂತಾರಾಷ್ಟಿçÃಯ ಹಾಕಿ ಆಟಗಾರ್ತಿ ಎಂ.ಜಿ. ಲೀಲಾವತಿ ೬ ಗೋಲು ಬಾರಿಸಿ ಮಿಂಚಿದರು. ೧,೪,೬,೮,೩೯ ಹಾಗೂ ೫೦ನೇ ನಿಮಿಷದಲ್ಲಿ ಲೀಲಾವತಿ ಗೋಲು ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಪವಿತ್ರ ೧೯ನೇ ನಿಮಿಷದಲ್ಲಿ, ಚಿತ್ರ ೨೮ನೇ ನಿಮಿಷದಲ್ಲಿ, ದೀಪ್ತಿ ೪೧ನೇ ನಿಮಿಷದಲ್ಲಿ ತಲಾ ಒಂದೊAದು ಗೋಲು ಗಳಿಸಿದರು. ಭಾರತೀಯರ್ ಯೂನಿವರ್ಸಿಟಿ ಶ್ರೀ ಕೃಷ್ಣ ದೇವರಾಯ ಯೂನಿವರ್ಸಿಟಿ ವಿರುದ್ಧ ೪-೦ ಗೋಲುಗಳ ಗೆಲುವು ದಾಖಲಿಸಿತು. ವಿಜೇತ ತಂಡದ ಪರ ಎಸ್. ಮಲರ್ವಿಜಿ ೨೩ನೇ ನಿಮಿಷದಲ್ಲಿ, ಎನ್.ಕಾವ್ಯ ೨೮ ನೇ ನಿಮಿಷದಲ್ಲಿ, ಎನ್ ರೂಪಶ್ರೀ ೩೯ ನೇ ನಿಮಿಷದಲ್ಲಿ, ಎಸ್.ಶಭರಿಮಣಿದೇವಿ ೪೨ ನೇ ನಿಮಿಷದಲ್ಲಿ ತಲಾ ಒಂದೊAದು ಗೋಲು ಹೊಡೆದರು.
ಕ್ಯಾಲಿಕಟ್ ಯೂನಿವರ್ಸಿಟಿ ವಿರುದ್ಧ ಮದ್ರಾಸ್ ಯೂನಿವರ್ಸಿಟಿ ೨-೧ ಗೋಲುಗಳ ರೋಚಕ ಜಯ ಸಾಧಿಸಿತು. ಮದ್ರಾಸ್ ಪರವಾಗಿ ಎಂ.ಎಸ್. ಜಯವರ್ಷ ೨ನೇ ನಿಮಿಷದಲ್ಲಿ ಒಂದು ಗೋಲು ಬಾರಿಸಿದರು. ಕ್ಯಾಲಿಕಟ್ನ ಶ್ವೇತ ೨೭ ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಪಂದ್ಯ ಸಮ ಮಾಡಿದರು. ೪೬ ನೇ ನಿಮಿಷಕ್ಕೆ ಮದ್ರಾಸ್ ಪರ ಪ್ರಿಯಾಂಕಾ ಗೋಲು ಬಾರಿಸಿ ತಮ್ಮ ತಂಡದ ಗೆಲುವಿಗೆ ಕಾರಣರಾದರು.
ಮೈಸೂರು ಯೂನಿವರ್ಸಿಟಿ, ಎಂ.ಎಸ್.ಯೂನಿವರ್ಸಿಟಿ ವಿರುದ್ಧ ೧೧-೦ ಗೋಲುಗಳ ಭರ್ಜರಿ ಜಯ ಸಾಧಿಸಿತು.
ಮೈಸೂರು ಯೂನಿವರ್ಸಿಟಿ ಪರ ಎಸ್.ಪಿ.ಕೃತಿಕ ೫ನೇ ನಿಮಿಷದಲ್ಲಿ, ಎಸ್.ಡಿ ಸಂದ್ಯಾ ೮ನೇ ನಿಮಿಷದಲ್ಲಿ, ಶೈನ ತಂಗಮ್ಮ ೧೦ನೇ ನಿಮಿಷದಲ್ಲಿ, ಅನ್ನಪೂರ್ಣ ೨೮ನೇ ನಿಮಿಷದಲ್ಲಿ, ಎನ್.ಆರ್. ಸೌಮ್ಯಶ್ರೀ ೩೫ನೇ ನಿಮಿಷದಲ್ಲಿ ತಲಾ ಒಂದೊAದು ಗೋಲು ಬಾರಿಸಿದರು.
ಯಶಿಕ ೧೬ ಹಾಗೂ ೧೮ ನಿಮಿಷದಲ್ಲಿ, ಬಿ.ಎನ್. ಪೂಜಿತ ೪೨ ಹಾಗೂ ೫೩ನೇ ನಿಮಿಷದಲ್ಲಿ, ಟಿ.ಚಂದನ ೪೭ಹಾಗೂ ೫೪ನೇ ನಿಮಿಷದಲ್ಲಿ ತಲಾ ಎರಡು ಗೋಲುಗಳನ್ನು ಬಾರಿಸಿದರು.
ಲೀಗ್ ಪಂದ್ಯ ಫಲಿತಾಂಶ
ಮೊದಲನೇ ಲೀಗ್ ಪಂದ್ಯದಲ್ಲಿ ಭಾರತೀಯರ್ ಯೂನಿವರ್ಸಿಟಿ, ಮಂಗಳೂರು ಯೂನಿವರ್ಸಿಟಿಯನ್ನು ೨-೦ ಗೋಲುಗಳಿಂದ ಸೋಲಿಸಿತು.
ವಿಜೇತ ತಂಡದ ಪರ ಎಸ್.ಶಬರಿಮಣಿದೇವಿ ೧೩ ಹಾಗೂ ೪೮ ನೇ ನಿಮಿಷದಲ್ಲಿ ಗೋಲು ಗಳಿಸಿ ಮಿಂಚಿದರು. ಎರಡನೇ ಲೀಗ್ ಪಂದ್ಯದಲ್ಲಿ ಮೈಸೂರು ಯೂನಿ ವರ್ಸಿಟಿ ಮದ್ರಾಸ್ ಯೂನಿವರ್ಸಿಟಿ ಯನ್ನು ೬-೦ ಗೋಲುಗಳ ಅಂತರದಿAದ ಬಗ್ಗು ಬಡಿಯಿತು.
ಮೈಸೂರು ತಂಡದ ಪರ ಪೂಜಿತ ೩೩ ಹಾಗೂ ೪೦ನೇ ನಿಮಿಷದಲ್ಲಿ ೨ ಗೋಲು ಹೊಡೆದರು. ಯಶಿಕ ೨೧ನೇ ನಿಮಿಷದಲ್ಲಿ, ಚಂದನ ೩೫ನೇ ನಿಮಿಷದಲ್ಲಿ, ಪದ್ಮಾವತಿ ೪೫ನೇ ನಿಮಿಷದಲ್ಲಿ ಶೈನ್ ತಂಗಮ್ಮ ೪೭ನೇ ನಿಮಿಷದಲ್ಲಿ ತಲಾ ಒಂದೊAದು ಗೋಲು ಗಳಿಸಿದರು. -ಚನ್ನನಾಯಕ