ಮಡಿಕೇರಿ, ಡಿ. ೩೦: ತೂಕ್‌ಬೊಳಕ್ ಕೊಡವ ವಾರಪತ್ರಿಕೆ, ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿ, ಹರದಾಸ ಅಪ್ಪÀನೆರವಂಡ ಅಪ್ಪಚ್ಚಕವಿ ಪ್ರತಿಮೆ ಪ್ರತಿಷ್ಠಾಪನಾ ಸಮಿತಿ ಹಾಗೂ ವೀರಾಪೇಟೆಯ ಹಿರಿಯ ನಾಗರಿಕರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಜ. ೫ರಂದು ವೀರಾಜಪೇಟೆ ಮಹಿಳಾ ಸಮಾಜದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಇತ್ತೀಚೆಗೆ ನಿಧನರಾದ ಚತುರ್ಭಾಷಾ ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಅವರ ಶೋಕಾಚರಣೆ ನಡೆಯಲಿದೆ ಎಂದು ತೂಕ್‌ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅವರು ತಿಳಿಸಿದ್ದಾರೆ.