ಕೂಡಿಗೆ, ಡಿ. ೨೯: ಕೂಡಿಗೆಯ ಹೋಲಿ ಫ್ಯಾಮಿಲಿ ಚರ್ಚ್ನ ವಾರ್ಷಿಕೋತ್ಸವ ಕಾರ್ಯಕ್ರಮ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಸಮುದಾಯದ ವಿದ್ಯಾರ್ಥಿಗಳಲ್ಲಿ ಹೆಚ್ಚು ಅಂಕ ಗಳಿಸಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಚರ್ಚ್ನ ಫಾದರ್ ಜಾಲ್ಸ್ ನರೋನ ಅವರನ್ನು ಮಡಿಕೇರಿಯ ಪ್ರಧಾನ ಗುರುಗಳಾದ ದೀಪಕ್ ಜಾರ್ಜ್ ಸನ್ಮಾನಿಸಿದರು. ಕಾರ್ಯಕ್ರಮದ ಅಂಗವಾಗಿ ವಿಶೇಷ ಪ್ರಾರ್ಥನೆ ಮತ್ತು ಸಹ ಭೋಜನ ನಡೆಯಿತು. ಕಾರ್ಯಕ್ರಮದಲ್ಲಿ ಸಮೀಪದ ಚರ್ಚ್ನ ಗುರುಗಳು ಮತ್ತು ಸಮುದಾಯ ಬಾಂಧವರು ಭಾಗವಹಿಸಿದ್ದರು.