ಚೆಟ್ಟಳ್ಳಿ, ಡಿ. ೨೯: ಪುತ್ತರಿ ಊರೊರ್ಮೆ ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಊರೊರ್ಮೆ ಬಾಣೆಯಲ್ಲಿ ಮುಳ್ಳಂಡ ರತ್ತು ಚಂಗಪ್ಪ ಅಧ್ಯಕ್ಷತೆಯಲ್ಲಿ ನಡೆಯಿತು.
ರತ್ತು ಚಂಗಪ್ಪ ಮಾತನಾಡಿ, ಹಿಂದಿನಿAದಲೂ ಮಂದ್ ಬಡಾವಣೆಗಳಲ್ಲಿ ಪುತ್ತರಿ ಹಬ್ಬದ ನಂತರ ಊರೊರ್ಮೆಯನ್ನು ಆಚರಿಸುತಿದ್ದು, ಇಂದು ಮರೆಯಾಗುತ್ತಿದೆ. ಮುಂದಿನ ಪೀಳಿಗೆಗೆ ಹಬ್ಬಹರಿದಿನ ಸಂಪ್ರದಾಯವನ್ನು ಉಳಿಸಿಬೆಳೆಸುವಂತಾಗಬೇಕೆAದರು. ನಿವೃತ್ತ ಸೇನಾನಿ ಪುತ್ತರಿರ ಗಣೇಶ್ ಭೀಮಯ್ಯ ಹಾಗೂ ಪುತ್ತರಿರ ಕಾಶಿ ಸುಬ್ಬಯ್ಯ ಹಾಜರಿದ್ದರು. ಕಾರ್ಯದರ್ಶಿ ಬೊಪ್ಪಟಿರ ಅಪ್ಪು ನಾಣಯ್ಯ ಸ್ವಾಗತಿಸಿ, ವಂದಿಸಿದರು. ದೇವನೆಲೆಯಲ್ಲಿ ಮೀದಿ ಇಡುವ ಮೂಲಕ ಊರಿಗೆ ಒಳಿತು ಮಾಡಬೇಕೆಂದು ಬೇಡಿಕೊಂಡರು. ಊರಿನ ಹಿರಿಯರು, ಕಿರಿಯರು, ಮಹಿಳೆಯರು ಭಾಗವಹಿಸಿದ್ದರು.
ಊರಿನಲ್ಲಿ ಸಾಧಕರು ಪದವಿ ಹಾಗೂ ಮೇಲ್ಪಟು ಉತ್ತೀರ್ಣರಾದವರಿಗೆ ಸನ್ಮಾನಿಸಲಾಗುತ್ತಿದ್ದು, ಈ ಬಾರಿ ಎಂಬಿಎ ಇನ್ ಮಾರ್ಕೆಟಿಂಗ್ನಲ್ಲಿ ಉತ್ತೀರ್ಣರಾದ ಬಟ್ಟಿರ ಬೋಜಣ್ಣ ಹಾಗೂ ಬಟ್ಟೀರ ಸೋಮಣ್ಣ ಅವರಿಗೆ ಊರಿನವರ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.