ಕೂಡಿಗೆ, ಡಿ. ೨೯ : ಕಳೆದ ಆರು ತಿಂಗಳುಗಳಿAದ ಕೊಡಗು ಜಿಲ್ಲೆಯ ರೇಷ್ಮೆ ಬೆಳೆಯ ಬಿತ್ತನೆಗೂಡಿಗೆ ೩,೪೦೦ ರೂ. ಉತ್ತಮ ಬೆಲೆ ಇರುವುದರಿಂದ ಮತ್ತು ಸರಕಾರ ರೇಷ್ಮೆ ಇಲಾಖೆಯ ಮೂಲಕ ರೈತರಿಗೆ ವಿವಿಧ ಹೊಸ ಯೋಜನೆ ಅನುಗುಣವಾಗಿ, ಜಿಲ್ಲೆಯ ರೇಷ್ಮೆ ಬೆಳೆಗಾರರು ಯೋಜನೆಯ ಸದುಪಯೋಗವನ್ನು ಪಡೆದುಕೊಂಡು ರೇಷ್ಮೆ ಕೃಷಿಯಲ್ಲಿ ಹೆಚ್ಚಿನ ರೈತರು ತೊಡಗಿಸಿಕೊಳ್ಳಬೇಕು ಎಂದು ರೇಷ್ಮೆ ಅಧೀಕ್ಷಕ ಮಹೇಶ್ ಹೇಳಿದರು. ಚಿಕ್ಕತ್ತೂರು ಗ್ರಾಮದ ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ಗಣೇಶ್‌ನವರ ಹಿಪ್ಪನೇರಳೆ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈಗಿನ ರೇಷ್ಮೆ ಗೂಡಿನ ಮಾರುಕಟ್ಟೆ ಬೆಲೆಯು ಹೆಚ್ಚು ಇರುವುದರಿಂದ ರೇಷ್ಮೆ ಗಿಡ ನಾಟಿ ಕಾರ್ಯ ಮಾಡಲು ಗ್ರಾಮದ ರೈತರಲ್ಲಿ ಮನವಿ ಮಾಡಿದರು.

ಜಿಲ್ಲೆಯ ರೇಷ್ಮೆ ಬಿತ್ತನೆ ಗೂಡು ಒಂದು ಕೆಜಿಗೆ ೩,೪೦೦ ರೂ ಇರುವುದರಿಂದ, ಮತ್ತು ಜಿಲ್ಲೆಯ ಉತ್ತಮ ಹವಾಮಾನ ವಾತಾವರಣದಲ್ಲಿ ಬೆಳೆದ ರೇಷ್ಮೆ ಗೂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಾಗಿ ಬಿತ್ತನೆಕೋಟೆಕ್ಕೆ ಹೋಗುತ್ತದೆ ಇದರಿಂದಾಗಿ ಉತ್ತಮ ಗುಣಮಟ್ಟದ ರೇಷ್ಮೆ ಮೊಟ್ಟೆಗಳು ಬರುತ್ತವೆ ಅದರಿಂದಾಗಿ ಅ ಮೊಟ್ಟೆಗಳಲ್ಲಿ ರೇಷ್ಮೆ ಹುಳು ಸಾಕಾಣಿಕೆಗೆ ಅನುಕೂಲವಾಗುವುದು. ಎಂದು ಅಧಿಕಾರಿ ಮಹೇಶ್ ತಿಳಿಸಿದರು

ಇದರಿಂದಾಗಿ ರಾಜ್ಯದ ವಿವಿಧ ಜಿಲ್ಲೆಯ ರೇಷ್ಮೆ ಬಿತ್ತನೆಕೋಟೆಯವರು ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಒಂದು ಕೆಜಿಗೆ ೨,೪೦೦ ರಿಂದ ೩,೪೦೦ ರೂ. ವರೆಗೆ ಬೆಲೆ ನೀಡಿ ಖರೀದಿ ಮಾಡುತ್ತಿದ್ದಾರೆ.

ಜಿಲ್ಲೆಯ ರೈತರು ರೇಷ್ಮೆ ಬೆಳೆದ ನಂತರ ರೇಷ್ಮೆ ಗೂಡನ್ನು ಬೆಂಗಳೂರು, ರಾಮನಗರದ ರೇಷ್ಮೆ ಮಾರುಕಟ್ಟೆಗೆ ತೆಗೆದುಕೊಂಡು ಹೋಗಬೇಕಾಗಿತ್ತು. ಆದರೆ ಕೆಲ ಖರೀದಿದಾರರು ಗ್ರಾಮಗಳಿಗೆ ಬಂದು ಖರೀದಿ ಮಾಡುತ್ತಿದ್ದಾರೆ. ಇದರಿಂದಾಗಿ ರೇಷ್ಮೆ ಗೂಡಿಗೆ ಉತ್ತಮವಾದ ಬೆಲೆ ಸಿಗುತ್ತಿದೆ ಎಂದು ರೇಷ್ಮೆ ಬೆಳೆಗಾರರಾದ ಗಣೇಶ್ ಮಂಜಣ್ಣ ಕುಮಾರ್ ಶಿರಂಗಾಲದ ದಿನೇಶ್ ಅಳುವಾರದ ಪ್ರಭಾಕರ್ ತಿಳಿಸಿದರು.

ಸರಕಾರದ ನಿಯಮಾನುಸಾರವಾಗಿ ರೇಷ್ಮೆ ಬೆಳೆಯ ಅಭಿವೃದ್ಧಿ ಪೂರಕವಾಗಿ ರಾಷ್ಟಿçÃಯ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ಹಿಪ್ಪನೇರಳೆ ತೋಟಗಳ ಅಭಿವೃದ್ಧಿ ಮತ್ತು ನಿರ್ವಹಣೆ ಎಕರೆವಾರು ಹಣವನ್ನು ನೀಡಲಾಗುತ್ತಿದೆ . ಇಲಾಖೆಯ ವಿವಿಧ ಯೋಜನೆಯ ಮೂಲಕ ರೇಷ್ಮೆ ಹುಳು ಸಾಕಾಣಿಕೆಯ ಮನೆ ನಿರ್ಮಾಣಕ್ಕೆ ಮತ್ತು ಚಾಕಿ ಮಾಡುವ ಸಲಕರಣೆಗಳು ಉಚಿತವಾಗಿ ಮತ್ತು ಸರಕಾರದ ನಿಯನಾನುಸಾರವಾಗಿ ವಿವಿಧ ಹಂತಗಳಲ್ಲಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ರೇಷ್ಮೆ ಬೆಳೆಗಾರರು ಬಳಕೆ ಮಾಡಿಕೊಳ್ಳುವಂತೆ ಮಹೇಶ್ ಮನವಿಯನ್ನು ಮಾಡಿರುತ್ತಾರೆ. ಈಗಾಗಲೇ ಶಿರಂಗಾಲ ಹೆಬ್ಬಾಲೆ ಮತ್ತು ಹುಲುಸೆ ಅಳುವಾರ ಸಿದ್ದಲಿಂಗಪುರ ವ್ಯಾಪ್ತಿಯ ಕೆಲ ರೈತರು ರೇಷ್ಮೆ ಬೆಳೆಯನ್ನು ಬೆಳೆಯಲು ಸಿದ್ಧರಾಗಿರುತ್ತಾರೆ ಅವರುಗಳಿಗೆ ಹಿಪ್ಪನೇರಳೆ ಕಡ್ಡಿಗಳನ್ನು ನೆಡಲು ಬೇಕಾಗುವ ಸಲಹೆಗಳನ್ನು ನೀಡಲಾಗುತ್ತಿದೆ. ಜೊತೆಗೆ ಯೋಜನೆಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. - ಕೆ.ಕೆ. ನಾಗರಾಜಶೆಟ್ಟಿ.