ಮಡಿಕೇರಿ, ಡಿ. ೨೮: ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ರೂ. ೨೨.೫೪ ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಚೆಪ್ಪುಡೀರ ಎಂ. ಅಪ್ಪಯ್ಯ ತಿಳಿಸಿದರು. ಸಂಘದ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸದಸ್ಯರುಗಳಿಗೆ ಶೇ. ೧೮ ಡಿವಿಡೆಂಟ್ ನೀಡಲಾಗುವುದು. ೨೦೨೦-೨೧ನೇ ಸಾಲಿನಲ್ಲಿ ರೂ. ೬೬೯.೨೫ ಲಕ್ಷ ಠೇವಣಿ ಇದ್ದು, ಕೃಷಿ ಹಾಗೂ ಕೃಷಿಯೇತರ ಸಾಲ ರೂ. ೧೦೧೭.೯೭ ಲಕ್ಷ ನೀಡಲಾಗಿದೆ. ವಸೂಲಾತಿ ಪ್ರಗತಿಯಲ್ಲಿದೆ ಹಾಗೂ ಸಂಘದಲ್ಲಿ ರೈತರಿಗೆ ಉಪಯೋಗವಾಗುವಂತೆ ಕೃಷಿ ಉಪಕರಣಗಳು ಮಾರಾಟಕ್ಕೆ ಲಭ್ಯವಿದ್ದು ಕಾಫಿ ಔಟರ್ನ್ ಟೆಸ್ಟ್ ಯಂತ್ರವಿದೆ. ಸದಸ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದರು. ಈ ಸಂದರ್ಭ ಉಪಾಧ್ಯಕ್ಷ ಜಂಗಮರ ಎಸ್. ಲೋಕೇಶ್, ಸಂಘದ ನಿರ್ದೇಶಕರುಗಳಾದ ನಾಮೇರ ಸಿ. ವಿಶ್ವನಾಥ್, ಆಪಟ್ಟೀರ ಎಸ್. ನಾಚಯ್ಯ, ಆಪಟ್ಟೀರ ಎ. ಬೋಪಣ್ಣ, ಕಾಳಪಂಡ ಎ. ಸತೀಶ್, ಚೆಪ್ಪುಡೀರ ಎನ್. ಅಪ್ಪಣ್ಣ, ಕುಂಬಾರರ ಆರ್. ಶ್ರೀನಿವಾಸ್, ನಾಮಧಾರಿ ಆರ್. ಪ್ರವೀಣ್, ಸಣ್ಣುವಂಡ ಎ. ಗುಣ, ಮಲ್ಲೇಂಗಡ ಪಿ. ಮುತ್ತಮ್ಮ, ಹೆಚ್.ಡಿ. ರಮೇಶ್, ಪಿ.ಪಿ. ಅಪ್ಪಣ್ಣ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್‌ನ ಮೇಲ್ವಿಚಾರಕ ಶಂಕರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಕೆ. ಇಸ್ಸಾರ್ ಹಾಜರಿದ್ದರು.