ಸಿದ್ದಾಪುರ, ಡಿ. ೨೮: ಯೋಧ ನಮನ ರಥಯಾತ್ರೆ ಸಿದ್ದಾಪುರಕ್ಕೆ ಆಗಮಿಸಿತು. ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀನಾ ತುಳಸಿ, ಪಂಚಾಯಿತಿ ಸದಸ್ಯರುಗಳು ಪುಷ್ಪ ನಮನ ಸಲ್ಲಿಸಿದರು. ಹಿಂದೂಜಾಗರಣ ವೇದಿಕೆಯ ಪದಾಧಿಕಾರಿಗಳು ಹಾಜರಿದ್ದರು. ರಥಯಾತ್ರೆ ಸಿದ್ದಾಪುರ ಸುತ್ತಮುತ್ತಲ ಗ್ರಾಮಕ್ಕಾಗಿ ಚೆನ್ನಯ್ಯನಕೋಟೆ ಗ್ರಾಮಕ್ಕೆ ತೆರಳಿತು.