ಮಡಿಕೇರಿ, ಡಿ. ೨೮: ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಮಾಲಿಕೆಯ ಎರಡನೇ ಕಾರ್ಯಕ್ರಮವಾಗಿ ಕೂರ್ಗ್ ಬೈ ರೇಸ್, ಯಾರಿಗೆ, ಯಾಕೆ ಹಾಗೂ ಪಡೆಯುದು ಹೇಗೇ ಎನ್ನುವುದರ ಸಂಪೂರ್ಣ ಅರಿವು ಗೂಗಲ್ ಮೀಟ್ ವೆಬಿನಾರ್'ನಲ್ಲಿ ನಡೆಯಲಿದೆ. ತಾ. ೨೯ರಂದು (ಇಂದು) ಸಂಜೆ ೫ ಗಂಟೆಗೆ, ಕೊಡವಾಮೆರ ಕೊಂಡಾಟ ಸಂಘಟನೆಯ ಉಪಾಧ್ಯಕ್ಷ ಮಾಳೇಟಿರ ಅಜಿತ್ ಪೂವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ವಕೀಲ, ಲಾಯರ್ಸ್ ಕಂಟಿನೆAಟಲ್ ಸ್ಥಾಪಕ, ಮಲ್ಲೇಂಗಡ ಬಿ. ಗಗನ್ ಗಣಪತಿ ಅವರು ಈ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ಸಾರ್ವಜನಿಕರು ಇದರ ಕುರಿತು ಅರಿವು ಪಡೆದುಕೊಳ್ಳುವುದರ ಜೊತೆಗೆ, ಏನೇ ಸಂಶಯವಿದ್ದಲ್ಲಿ, ಪ್ರಶ್ನೆ ಕೇಳುವ ಮೂಲಕ ಬಗೆಹರಿಸಿಕೊಳ್ಳಬಹುದು. ಸಾರ್ವಜನಿಕರು ಕಾರ್ಯಕ್ರಮಕ್ಕೆ ಸೇರಲು ಈ ಲಿಂಕ್ ಬಳಸಬಹುದು. hಣಣಠಿs://meeಣ.googಟe.ಛಿom/ರಿಜb-ihಛಿs-ಡಿರಿಜ ಎಂದು ಪ್ರಕಟಣೆ ತಿಳಿಸಿದೆ.