ಸೋಮವಾರಪೇಟೆ, ಡಿ. ೨೮: ದೇಶದಲ್ಲಿ ಕೋಮು ಸೌಹಾರ್ದತೆಯೊಂದಿಗೆ ಶಾಂತಿ-ಸಾಮರಸ್ಯ ನೆಲೆಸಲಿ ಎಂದು ಪ್ರಾರ್ಥಿಸಲು ಸೋಮವಾರಪೇಟೆಯ ಇಂದಿರಾಗಾAಧಿ ಅಭಿಮಾನಿಗಳ ಸಂಘದ ವತಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಳ್ಳಲಾಯಿತು.

ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳಾದ ಸತ್ಯನಾರಾಯಣ, ಹೆಚ್.ಜಿ. ರವೀಂದ್ರ, ಹೆಚ್.ವಿ. ಗಿರೀಶ್, ಕೆ.ಎಸ್. ಪುನೀತ್, ಹೆಚ್.ಜಿ. ಮುರುಳಿ, ನರಸಿಂಹ, ಎನ್.ಇ. ಮನೋಜ್, ಯಶ್ವಂತ್ ಅವರುಗಳು ಪಾದಯಾತ್ರೆ ತೆರಳಿದ್ದು, ಇಲ್ಲಿನ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇಶದಲ್ಲಿ ಸೌಹಾರ್ದತೆ ನೆಲೆಸಲಿ ಎಂದು ಧರ್ಮಸ್ಥಳ ಕ್ಷೇತ್ರಕ್ಕೆ ಕಳೆದ ೩೦ ವರ್ಷಗಳಿಂದ ಪಾದಯಾತ್ರೆ ನಡೆಸುತ್ತಿರುವುದಾಗಿ ನಾಗರಾಜ್ ತಿಳಿಸಿದರು. ಈ ಸಂದರ್ಭ ಸಂಘದ ಕಾರ್ಯದರ್ಶಿ ರಾಜಪ್ಪ, ಮಣಿಕಂಠ, ಶೇಷಪ್ಪ ಅವರುಗಳು ಉಪಸ್ಥಿತರಿದ್ದರು.