ಕಡಂಗ, ಡಿ. ೨೯: ಹಿಂದೂ ಜಾಗರಣ ವೇದಿಕೆ ಹಾಗೂ ಹಿಂದೂ ಯುವವಾಹಿನಿ ವತಿಯಿಂದ ಹಮ್ಮಿಕೊಂಡಿರುವ ಯೋಧ ನಮನ ಶ್ರದ್ಧಾಂಜಲಿ ರಥಯಾತ್ರೆ ಕಾಕೋಟುಪರಂಬುಗೆ ಆಗಮಿಸಿದ ಸಂದರ್ಭ ಗ್ರಾಮಸ್ಥರಿಂದ ಸ್ವಾಗತಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೇವಡ ಗಿರೀಶ್, ವಿ ಎಸ್ ಎಸ್ ಬ್ಯಾಂಕ್ ಅಧ್ಯಕ್ಷ ಪೆಮ್ಮಯ್ಯ, ಅಯ್ಯಣ್ಣ, ನಿವೃತ ಯೋಧರು, ಕಾಕೋಟುಪರಂಬು ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.