ಮಡಿಕೇರಿ, ಡಿ. ೨೯: ಶೈಕ್ಷಣಿಕ ವರ್ಷ-೨೦೨೧-೨೨ನೇ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರ ಇಲ್ಲಿ ನಡೆಸಲಾಗುವ ಎಂ.ಎ. ಕೊಡವ ಸ್ನಾತಕೋತ್ತರ ಕಾರ್ಯಕ್ರಮದ ಪ್ರವೇಶಾತಿಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ತಾ. ೩೧ ಕೊನೆಯ ದಿನವಾಗಿದೆ. ಪ್ರವೇಶಾತಿ ಅರ್ಜಿ ಶುಲ್ಕ ರೂ. ೧೦೦ (ಪ.ಜಾ/ಪ.ಪಂ/ಪ್ರವರ್ಗ-೧ ರೂ. ೫೦). ಅಂಚೆ ಮೂಲಕ ಅರ್ಜಿಗಳನ್ನು ಪಡೆಯುವ ವಿದ್ಯಾರ್ಥಿಗಳು ಸ್ವ ವಿಳಾಸವುಳ್ಳ ಲಕೋಟೆಯೊಂದಿಗೆ ಹೆಚ್ಚುವರಿಯಾಗಿ ರೂ. ೫೦ನ್ನು ಪಾವತಿಸುವುದು. ಅರ್ಜಿ ಶುಲ್ಕವನ್ನು ಚಲನ್, ಡಿ.ಡಿ. (ಹಣಕಾಸು ಅಧಿಕಾರಿ, ಮಂಗಳೂರು ವಿಶ್ವವಿದ್ಯಾನಿಲಯ) ಮೂಲಕ ಪಾವತಿಸುವುದು ಅಥವಾ ವಿಶ್ವವಿದ್ಯಾನಿಲಯ ಜಾಲತಾಣದಲ್ಲಿ ಲಭ್ಯವಿರುವ ಆನ್‌ಲೈನ್ ಲಿಂಕ್ (ಟರ್ಮ್ ಪೀ ಫಾರ್ ಪಿಜಿ ಡಿಪಾರ್ಟ್ಮೆಂಟ್ ೦೦೨-ಪಾಯಿಂಟ್ ೧೪ ಅಪ್ಲಿಕೇಶನ್ ಫೀ) ಬಳಸಿ ಶುಲ್ಕ ಪಾವತಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಭರ್ತಿ ಮಾಡಿದ ಅರ್ಜಿ ಹಾಗೂ ಅಗತ್ಯ ದಾಖಲೆಗಳನ್ನು ಸಂಬAಧಪಟ್ಟ ಅಧ್ಯಕ್ಷರು, ಸಂಯೋಜಕರಿಗೆ ತಾ. ೩೧ ರೊಳಗೆ ಸಲ್ಲಿಸುವುದು. ಅರ್ಜಿ ನಮೂನೆ ಮತ್ತು ಹೆಚ್ಚಿನ ವಿವರಗಳನ್ನು ತಿತಿತಿ.mಚಿಟಿgಚಿಟoಡಿeuಟಿiveಡಿsiಣಥಿ.ಚಿಛಿ.iಟಿನಲ್ಲಿ ಪಡೆಯಬಹುದು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಸದಸ್ಯರಾದ ಬಾಚರಣಿಯಂಡ ಪಿ.ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ಡಾ. ಮುಲ್ಲೇಂಗಡ ರೇವತಿ ಪೂವಯ್ಯ, ಡಾ. ರೇಖಾ ವಸಂತ್, ಡಾ. ನಡಿಕೇರಿಯಂಡ ಪೂವಯ್ಯ, ಡಾ. ಸೋಮಣ್ಣ ಇವರ ಸಹಕಾರದಲ್ಲಿ ಪಠ್ಯಕ್ರಮವನ್ನು ತಯಾರಿಸಲಾಗಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.