ಸುಂಟಿಕೊಪ್ಪ, ಡಿ. ೨೮: ಅಂರ‍್ರಾಷ್ಟಿçÃಯ ಹಾಕಿಪಟು, ಭಾರತ ಸರಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಎಂ.ಪಿ. ಗಣೇಶ್ ಅವರನ್ನು ತಾ. ೨೯ ರಂದು (ಇಂದು) ಬೆಳಿಗ್ಗೆ ಅವರ ಹುಟ್ಟೂರಾದ ಅಂದಗೋವೆ ಗ್ರಾಮದಲ್ಲಿ ವಿವಿಧ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಗುವುದು.

ಬೆಳಿಗ್ಗೆ ೧೧ ಗಂಟೆಗೆ ಅಂದಗೋವೆಯ ಮೊಳ್ಳೇರ ಐನ್‌ಮನೆಯಲ್ಲಿ ಹಿರಿಕರಿಗೆ ಪೂಜೆ ಸಲ್ಲಿಸಿದ ನಂತರ ಅಂದಗೋವೆ ಗ್ರಾಮದ ಶ್ರೀ ಭಗವತಿ ದೇವಾಲಯದ ಆವರಣದಲ್ಲಿ ಪದ್ಮಶ್ರೀ ಎಂ.ಪಿ. ಗಣೇಶ್ ಅವರನ್ನು ಸನ್ಮಾನಿಸಿದ ನಂತರ ಅಪರಾಹ್ನ ೨ ಗಂಟೆಗೆ ತೆರೆದ ಜೀಪಿನಲ್ಲಿ ಅಂದಗೋವೆ ಗ್ರಾಮಸ್ಥರು ಹಾಗೂ ಅಭಿಮಾನಿಗಳು ಸುಂಟಿಕೊಪ್ಪ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಕರೆದೊಯ್ಯಲಿದ್ದಾರೆ.