ಶ್ರೀಮಂಗಲ, ಡಿ. ೨೭: ಬಾಡಗರಕೇರಿ ಮೃತ್ಯುಂಜಯ ಯುವಕ ಸಂಘ ಆಯೋಜಿಸಿದ್ದ ಹುದಿಕೇರಿ ಮತ್ತು ಶ್ರೀಮಂಗಲ ಹೋಬಳಿ ವ್ಯಾಪ್ತಿಯ ತಂಡಗಳ ನಡುವೆ ಮುಕ್ತ ವಾಲಿಬಾಲ್ ಪಂದ್ಯಾವಳಿಯಲ್ಲಿ ನಾಲ್ಕೇರಿ ತಂಡ ಮೊದಲ ಪ್ರಶಸ್ತಿ ಪಡೆದರೆ, ಟಿ.ಶೆಟ್ಟಿಗೇರಿಯ ಎ.ವೈ.ಸಿ. ತಂಡ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿತು.

ಬಾಡಗರಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ನಾಲ್ಕೇರಿ ತಂಡ ಟ್ರೋಫಿ ಹಾಗೂ ರೂ. ೧೦ ಸಾವಿರ ನಗದು, ರನ್ರ‍್ಸ್ ತಂಡ ಟಿ.ಶೆಟ್ಟಿಗೇರಿಯ ಟ್ರೋಫಿಯೊಂದಿಗೆ ರೂ. ೭೫೦೦ ನಗದು ಪ್ರಶಸ್ತಿ ಪಡೆಯಿತು.

೩ನೇ ಸ್ಥಾನಕ್ಕಾಗಿ ನಡೆದ ಪಂದ್ಯಾಟದಲ್ಲಿ ಅತಿಥೇಯ ಬಾಡಗರಕೇರಿ ತಂಡವನ್ನು ಸೋಲಿಸಿ, ನಡಿಕೇರಿಯ ತಲೆಬಲೇಶ್ವರ ತಂಡ ಟ್ರೋಫಿ ಹಾಗೂ ೫ ಸಾವಿರ ನಗದು ಪಡೆಯಿತು.

ಪ್ರಥಮ, ದ್ವಿತೀಯ ಹಾಗೂ ತೃತಿಯ ಸ್ಥಾನ ಪಡೆಯುವ ತಂಡಗಳಿಗೆ ಮುಂಡುಮಾಡ ತಮ್ಮ ತಾಯಿ ಮೀನಾಕ್ಷಿಯವರ ಜ್ಞಾಪಕಾರ್ಥವಾಗಿ ಟ್ರೋಫಿಯನ್ನು ನೀಡಿದರು. ಹಾಗೂ ಪ್ರಥಮ ಸ್ಥಾನದ ಆಟಗಾರರಿಗೆ ವೈಯಕ್ತಿಕ ಟ್ರೋಫಿಯನ್ನು ಚೋನಿರ ಅಭಿನ್, ಹಾಗೂ ದ್ವಿತೀಯ ತಂಡದ ಆಟಗಾರರಿಗೆ ವೈಯಕ್ತಿಕೆ ಟ್ರೋಫಿಯನ್ನು ಬಲ್ಯಮೀದೇರಿರ ಸುರೇಶ್ ಅವರು ಪ್ರಾಯೋಜಿಸಿದ್ದರು.