ನಾಪೋಕ್ಲು, ಡಿ. ೨೭: ದವಸ ಭಂಡಾರದ ಸದಸ್ಯರಿಗೆ ವಾರ್ಷಿಕವಾಗಿ ಸಾಲವನ್ನು ವಿತರಿಸಲು ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬೇತು ಗ್ರಾಮದ ದವಸ ಭಂಡಾರದ ಅಧ್ಯಕ್ಷ ಕೊಂಡೀರ ನಾಣಯ್ಯ ಹೇಳಿದರು. ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಸುಮಾರು ೧೯೨ ಮಂದಿ ಸದಸ್ಯರಿದ್ದು ಇವರ ಸಹಕಾರದಿಂದ ಸಂಘವು ಅಭಿವೃದ್ಧಿಯತ್ತ ಸಾಗಿದೆ ಎಂದರು.

ಕೊರೊನಾ ರೋಗಿಗಳನ್ನು ತಮ್ಮ ಸ್ವಂತ ಕಾರಿನಲ್ಲಿ ಮಡಿಕೇರಿಯ ಕೊರೊನಾ ಆಸ್ಪೆತ್ರೆಗೆ ಕೊಂಡೊಯ್ದು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ ಗ್ರಾಮ ಪಂಚಾಯತ್ ಸದಸ್ಯ ಸಾಬ ತಿಮ್ಮಯ್ಯ ಅವರನ್ನು ದವಸ ಭಂಡಾರದ ವತಿಯಿಂದ ಗ್ರಾಮಸ್ಥರ ಪರವಾಗಿ ಉದ್ಯಮಿ ಮಂಡೀರ ದೇವಿ ಪೂಣಚ್ಚ ಸನ್ಮಾನಿಸಿದರು. ನಿರ್ದೇಶಕರಾದ ಕಲ್ಯಾಟಂಡ ರಮೇಶ್ ಚಂಗಪ್ಪ, ಕೊಡೀರ ಸುರೇಶ್ ನಂಜಪ್ಪ, ಬೊಳ್ಳೇಪಂಡ ಜಾನು ಪೂಣಚ್ಚ, ಚೋಕಿರ ಪೊನ್ನಪ್ಪ, ಕೆ. ಶ್ಯಾಮ್ ಬೋಪಣ್ಣ, ಬೊಳ್ಳೇಪಂಡ ಪೆಮ್ಮಯ್ಯ, ಚೋಕಿರ ಪ್ರಭು ಪೂವಪ್ಪ, ಪಾತಂಡ ಜಯ, ಮುಕ್ಕಾಟಿರ ರೋಹಿಣಿ, ಅಪ್ಪೇರಿಯಂಡ ಗೌರಮ್ಮ ಮತ್ತಿತರರು ಇದ್ದರು.