ವೀರಾಜಪೇಟೆ, ಡಿ. ೨೮: ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಜವಾಬ್ದಾರಿ ವಕೀಲರು ಹಾಗೂ ನ್ಯಾಯಾಲಯಗಳ ಮೇಲಿವೆೆ. ನಾವು ಆದಷ್ಟು ಬೇಗನೇ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಆ ಮೂಲಕ ಜನರಿಗೆ ನ್ಯಾಯಾಂಗ ವ್ಯವಸ್ಥೆಯ ಮೇಲೆ ನಂಬಿಕೆ ಬರುವಂತೆ ಮಾಡಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಗಳಾದ ಎ.ಎಸ್ ಬೋಪಣ್ಣ ಹೇಳಿದರು.
ವೀರಾಜಪೇಟೆ ಸಮೀಪದ ಬಿಟ್ಟಂಗಾಲದ ಅಂಬಟ್ಟಿ ಗ್ರೀನ್ಸ್ ರೆಸಾರ್ಟ್ನಲ್ಲಿ ಆಯೋಜಿಸಲಾಗಿದ್ದ ವಕೀಲರ ಸಂಘದ ೬೦ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ದಿಟ್ಟ ಹೆಜ್ಜೆ ಇಡೀ ವ್ಯವಸ್ಥೆಯ ಬದಲಾವಣೆಗೆ ಕಾರಣವಾಗಬಲ್ಲದು. ಮಧ್ಯಸ್ಥಿಕೆ, ರಾಜಿ ತೀರ್ಮಾನ, ಲೋಕ ಅದಾಲತ್ ಮೂಲಕ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲು ವಕೀಲರು ಹಾಗೂ ವಕೀಲರ ಸಂಘ ಪ್ರಯತ್ನಿಸಬೇಕು. ವೀರಾಜಪೇಟೆಯ ವಕೀಲರುಗಳು, ನ್ಯಾಯಾಂಗ ವ್ಯವಸ್ಥೆಯ ಆಧಾರಸ್ತಂಭಗಳಿದ್ದAತೆ. ವಕೀಲರುಗಳು ಸಮಾಜ ಮತ್ತು ನ್ಯಾಯಾಂಗ ವ್ಯವಸ್ಥೆಯ ಕೊಂಡಿಗಳಾಗಿ ಕಾರ್ಯ ನಿರ್ವಹಿಸುತ್ತಾರೆ. ಕಕ್ಷಿದಾರರು ವಕೀಲರ ವೆಚ್ಚ ನೀಡಲಾಗದಿದ್ದರೂ ನ್ಯಾಯಪಡೆಯುವಂತÀ ಸರಳ ನ್ಯಾಯದಾನ ವ್ಯವಸ್ಥೆ ಇದೆ. ಇದರ ಸದ್ಭಳಕೆಯಾಗಬೇಕೆಂದರು.
ಕೊರೊನಾದಿಂದ ಕಾನೂನು ಕ್ಷೇತ್ರಕ್ಕೂ ವ್ಯತಿರಿಕ್ತ ಪರಿಣಾಮ ಬೀರಿತು. ಆದರೆ, ಕೆಲವೊಂದು ಬದಲಾವಣೆ ಯಿಂದ ಜನರಿಗೆ ಸಹಾಯವಾಗಿದೆ. ಕೆಡುಕಿಗಿಂತ ಒಂದು ರೀತಿಯಲ್ಲಿ ಒಳಿತೇ ಆಗಿದೆ. ಕೊರೊನಾ ಪರಿಸ್ಥಿತಿಯಲ್ಲಿ
(ಮೊದಲ ಪುಟದಿಂದ) ಕೋರ್ಟ್ಗಳು ಆನ್‌ಲೈನ್ ಮೂಲಕ ನಡೆದವು. ಇ-ಫೈಲಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಗಳ ಕಲಾಪಗಳು ನಡೆದು ಕಾನೂನು ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ ಸಾಧ್ಯವಾಯಿತು ಎಂದು ಹೇಳಿದ ಅವರು, ವಕೀಲರ ಸಂಘ ೬೦ ವರ್ಷಗಳು ತನ್ನ ಅಸ್ತಿತ್ವ ಉಳಿಸಿಕೊಂಡಿರುವುದು ಸಾಧಾರಣ ವಿಚಾರವಲ್ಲ ಎಂದು ಶ್ಲಾಘಿಸಿದರು.
ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ. ಶುಕುರೆ ಕಮಾಲ್ ಮಾತನಾಡಿ, ಕೊಡಗು ಜಿಲ್ಲೆ ಇಲ್ಲಿನ ಸಂಸ್ಕೃತಿ, ಆಹಾರ, ಪ್ರಕೃತಿ ಸೌಂಧರ್ಯದ ತವರೂರಾಗಿದೆ. ನಾನು ಮೂಲತಃ ಕೊಡ್ಲಿಪೇಟೆಯ ನಿವಾಸಿಯಾಗಿದ್ದು, ಎಲ್ಲರಂತೆ ಒಂದು ಸಾಧಾರಣ ಶಾಲೆಯಲ್ಲಿ ವಿದ್ಯೆ ಕಲಿತು ವಕೀಲನಾದವನು. ವಕೀಲವೃತ್ತಿ ಬಹಳ ಉತ್ತಮವಾದ ವೃತ್ತಿ. ಈ ವೃತ್ತಿಯಲ್ಲಿ ಮಾತ್ರ ನಾವು ಮನುಷ್ಯತ್ವವನ್ನು, ಭಾವನೆಗಳನ್ನು ಬಹಳ ಹತ್ತಿರದಿಂದ ವ್ಯಕ್ತಪಡಿಸಲು ಸಾಧ್ಯ. ಸಾಮಾನ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವAತ ವೃತ್ತಿಯಾಗಿದೆ. ನ್ಯಾಯಾಂಗ ವ್ಯವಸ್ಥೆ ಮೊದಲಿನಂತಿಲ್ಲ, ಸಾಕಷ್ಟು ಬದಲಾವಣೆಗಳಿಗೆ, ಹೊಸತನಗಳಿಗೆ ಒಡ್ಡಿಕೊಂಡಿದೆ. ಅದಕ್ಕೆ ಪೂರಕವಾದ ಕೌಶಲ್ಯಗಳನ್ನು ನಾವು ರೂಢಿಸಿಕೊಳ್ಳಬೇಕು. ವಕೀಲವೃತ್ತಿಗೆ ಇಂದು ಹೊಸರೀತಿಯ ಸವಾಲುಗಳು ಎದುರಾಗಿವೆ. ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯಂಥ ನೂರಾರು ಡಿಜಿಟಲ್ ಅಪರಾಧಗಳು ನಡೆಯುತ್ತಿವೆÉ. ಆ ವಿಚಾರ ಪರಿಹಾರ ವಿಷಯದಲ್ಲೂ ಪರಿಣಿತರಾಗಬೇಕಿದೆ ಎಂದು ಕರೆ ನೀಡಿದರು.
ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಬಿ. ವೀರಪ್ಪ ಮಾತನಾಡಿ, ನ್ಯಾಯಾಲಯಗಳಲ್ಲಿ ಪ್ರಕರಣಗಳು ಐದು ವರ್ಷ ಮತ್ತು ಹತ್ತು ವರ್ಷಗಳಷ್ಟು ಮೇಲ್ಪಟ್ಟು ಬಾಕಿ ಇಡಬಾರದು. ಸೈನಿಕರ ನಾಡು ಕೊಡಗಿನಿಂದ ಹಲವರು ಕಾನೂನು ಕ್ಷೇತ್ರಕ್ಕೆ ಸೇವೆ ನೀಡುತ್ತಿದ್ದಾರೆ. ಕೊಡಗಿನಲ್ಲಿ ಹುಟ್ಟಿ ಕಾನೂನು ಕ್ಷೇತ್ರದಲ್ಲಿ ಅತ್ಯಂತ ಮನ್ನಣೆಯನ್ನು ಗಳಿಸಿರುವ ಹಲವು ಹಿರಿಯ ವಕೀಲರು ಇದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ರಾಜ್ಯ ಉಚ್ಚನ್ಯಾಯಲಯದ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್ ಪೊನ್ನಣ್ಣ ಮಾತನಾಡಿ, ಇ-ಗ್ರಂಥಾಲಯ ಬೇಕು ಎಂದು ವಕೀಲರ ಸಂಘ ಬೇಡಿಕೆಯಿಟ್ಟಾಗ ವಕೀಲರ ಸಂಘಕ್ಕೆ ಅನುಕೂಲವಾಗುತ್ತದೆ, ಆ ಮೂಲಕ ಸುಪ್ರಿಂಕೋರ್ಟಿನ ತೀರ್ಪುಗಳನ್ನು ತಿಳಿಯಲು ವಕೀಲರಿಗೆ ಸಹಾಯವಾಗುತ್ತದೆ ಎನ್ನುವ ಉದ್ದೇಶದಿಂದ ಒಪ್ಪಿಕೊಂಡೆ. ಆ ಮೂಲಕ ನಾನು ಹುಟ್ಟಿದ ಊರಿಗೆ ನನ್ನ ತಂದೆಯವರು ವಕೀಲರಾಗಿ ಸೇವೆ ಸಲ್ಲಿಸಿದ್ದ ನ್ಯಾಯಾಲಯಕ್ಕೆ ಸಣ್ಣ ಸೇವೆ ಸಲ್ಲಿಸಲು ಇದೊಂದು ಅವಕಾಶ ದೊರೆತಿದೆ ಎಂದರು.
ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಐ.ಆರ್. ಪ್ರಮೋದ್ ಪ್ರಾಸ್ತಾವಿಕವಾಗಿ ಮಾತನಾಡಿ, ೧೯೬೧ರಲ್ಲಿ ವಕೀಲರ ಕಾಯ್ದೆ ಜಾರಿಯಾದ ನಂತರ ವೀರಾಜಪೇಟೆಯಲ್ಲಿ ಪಿ.ಕೆ ಕುಶಾಲಪ್ಪನವರ ಅಧ್ಯಕ್ಷತೆಯಲ್ಲಿ ವಕೀಲರ ಸಂಘ ಸೃಷ್ಟಿಯಾಯಿತು. ಎಂಟು ಜನರಿಂದ ಆರಂಭವಾದ ವಕೀಲರ ಸಂಘ ಇಂದು ೧೩೦ ವಕೀಲರುಗಳನ್ನು ಒಳಗೊಂಡಿದೆ. ಭೌಗೋಳಿಕವಾಗಿ ಕೊಡಗು ಚಿಕ್ಕ ಜಿಲ್ಲೆಯಾದರೂ ಸುಪ್ರಿಂಕೋರ್ಟ್ ನ್ಯಾಯಾಧೀಶರಾದ ಎ.ಎಸ್. ಬೋಪಣ್ಣರಿಂದ ಹಿಡಿದು, ಹೈಕೋರ್ಟ್ ನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಧೀಶರು, ಅಡ್ವೋಕೇಟ್ ಜನರಲ್‌ಗಳು, ಸುಪ್ರಿಂಕೋರ್ಟ್ ನ್ಯಾಯಾಧೀಶರು, ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಧೀಶರು, ಕಾನೂನು ಮಂತ್ರಿಗಳನ್ನು ನೀಡಿದೆ ಎಂದರು.
ರಾಜ್ಯ ಉಚ್ಚ ನ್ಯಾಯಲಯದ ರಿಜಿಸ್ಟಾರ್ ಜನರಲ್ ಶಿವಶಂಕರೇಗೌಡ, ಕೊಡಗು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಜಿನರಾಳ್ಕರ್ ಮಾತನಾಡಿದರು.
ಪುಸ್ತಕ ಬಿಡುಗಡೆ – ಇ-ಲೈಬ್ರರಿ ಉದ್ಘಾಟನೆ
ಇದೇ ಸಂದರ್ಭ ವಕೀಲರ ಸಂಘ ೧೯೬೧-೨೦೨೧ ರವರೆಗೆ ಬೆಳೆದು ಬಂದ ಹಾದಿಯನ್ನು ಮುದ್ರಿಸಿದ ‘ಕ್ರೋನಿಕಲ್’ ಪುಸ್ತಕವನ್ನು ಸುಪ್ರಿಂಕೋರ್ಟಿನ ಹಿರಿಯ ನ್ಯಾಯಮೂರ್ತಿ ಎ.ಎಸ್. ಬೋಪಣ್ಣ ಬಿಡುಗಡೆಗೊಳಿಸಿದರು.
ಎ.ಕೆ. ಸುಬ್ಬಯ್ಯ ಜ್ಞಾಪಕಾರ್ಥ ಇ-ಗ್ರಂಥಾಲಯವನ್ನು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿ ಎಂ.ಜಿ ಶುಕುರೆ ಕಮಾಲ್ ಲೋಕಾರ್ಪಣೆಗೊಳಿಸಿದರು.
ವೀರಾಜಪೇಟೆ ವಕೀಲರ ಸಂಘದಲ್ಲಿ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರುಗಳು, ವಕೀಲರ ಸಂಘದ ಮಾಜಿ ಉಪಾಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಹಿರಿಯ ವಕೀಲರನ್ನು ವೀರಾಜಪೇಟೆ ವಕೀಲರ ಸಂಘದಿAದ ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ಉಚ್ಚನ್ಯಾಯಲಯದ ಹಿರಿಯ ವಕೀಲರುಗಳಾದ ಎಂ.ಟಿ. ನಾಣಯ್ಯ, ಚಂದ್ರಮೌಳಿ, ರವೀಂದ್ರನಾಥ್ ಕಾಮತ್, ಸಿ.ಎಂ. ಪೂಣಚ್ಚ, ಹೈಕೋರ್ಟಿನ ರಿಜಿಸ್ಟಾರ್ ಭರತ್ ಕುಮಾರ್ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದರು. ವಕೀಲರುಗಳು, ಕುಟುಂಬಸ್ಥರು ಹಾಜರಿದ್ದರು. ವಕೀಲರ ಸಂಘದ ಸರ್ವ ಸದಸ್ಯರುಗಳು ಹಾಜರಿದ್ದರು.
ಕಾರ್ಯಕ್ರಮವನ್ನು ತಾರ ಮತ್ತು ಸಂಗಡಿಗರು ಪ್ರಾರ್ಥಿಸಿ, ಬಿ.ಬಿ. ಮಾದಪ್ಪ ಹಾಗೂ ಸಂಘದ ಖಜಾಂಜಿ ವಿ.ಜಿ. ರಾಕೇಶ್ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ. ದಿನೇಶ್ ಸ್ವಾಗತಿಸಿ, ವಕೀಲರ ಸಂಘದ ಜಂಟಿ ಕಾರ್ಯದರ್ಶಿ ವಿ.ಎಸ್. ಪ್ರೀತಮ್ ವಂದಿಸಿದರು.
ವರದಿ: ಉಷಾಪ್ರೀತಮ್