ಸೋಮವಾರಪೇಟೆ, ಡಿ. ೨೭: ರೈತರು ಹಾಗೂ ಕಾಫಿ ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಜೇಸಿ ವೇದಿಕೆಯಲ್ಲಿ ನಡೆಯುತ್ತಿರುವ ರೈತರ ಧರಣಿ ೧೫ನೇ ದಿನ ಪೂರೈಸಿದೆ.
ಬೆಳಗಾವಿಯಲ್ಲಿ ಸದನ ಆರಂಭವಾದಾಗಿನಿAದಲೂ ರೈತರು ಧರಣಿ ನಡೆಸುತ್ತಿದ್ದು, ಅಧಿವೇಶನ ಮುಗಿದರೂ ಸಹ ಈವರೆಗೆ ಸರ್ಕಾರದಿಂದ ಯಾವುದೇ ಸ್ಪಂದನ ದೊರೆತಿಲ್ಲ. ೧೦ ಹೆಚ್.ಪಿ. ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ಒದಗಿಸುವಂತೆ ಶಾಸಕರುಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಈವರೆಗೆ ಯಾವುದೇ ಅಧಿಕೃತ ಆದೇಶ ಹೊರಬಂದಿಲ್ಲ.
ರೈತರ ಧರಣಿಗೆ ಸೋಮವಾರಪೇಟೆ ವಾಹನ ಚಾಲಕರು ಮತ್ತು ಮೋಟಾರು ಕೆಲಸಗಾರರ ಸಂಘ ಹಾಗೂ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಬೆಂಬಲ ವ್ಯಕ್ತಪಡಿಸಿ, ಧರಣಿಯಲ್ಲಿ ಚಾಲಕರು ಪಾಲ್ಗೊಂಡರು. ರೈತರ ಬೇಡಿಕೆ ಸಮಂಜಸವಾಗಿದ್ದು, ಸರ್ಕಾರ ಬೇಡಿಕೆಯನ್ನು ಈಡೇರಿಸಬೇಕು ಎಂದು ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ಜಿ.ಸುರೇಶ್ ಒತ್ತಾಯಿಸಿದರು.
ಆಟೋ ಯೂನಿಯನ್ ಅಧ್ಯಕ್ಷ ಮೋಹನ್, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ನ ಎ.ಪಿ. ವೀರರಾಜು, ಪ್ರಗತಿಪರ ರೈತರಾದ ಎಚ್.ಆರ್. ಸುರೇಶ್, ಡಿ.ಎಸ್. ಚಂಗಪ್ಪ, ಕೆ.ಎಂ. ದಿನೇಶ್, ಎ.ಆರ್.P ÀÄಶಾಲಪ್ಪ, ಲಿಂಗೇರಿ ರಾಜೇಶ್, ಗರಗಂದೂರು ಲಕ್ಷö್ಮಣ್ ಮತ್ತಿತರರು ಇದ್ದರು.
ತಾ. ೨೯ರಂದು ಪಟ್ಟಣದ ಬಸವೇಶ್ವರ ರಸ್ತೆಯಿಂದ ಪ್ರಮುಖ ಮಾರ್ಗಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜೇಸೀ ವೇದಿಕೆಯಲ್ಲಿ ಬೃಹತ್ ಜಾಗೃತಿ ಸಭೆ ಆಯೋಜಿಸಲಾಗಿದ್ದು, ಗ್ರಾಮೀಣ ಭಾಗದಿಂದ ರೈತರು, ರೈತ ಸಂಘದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ದಿನೇಶ್ ತಿಳಿಸಿದ್ದಾರೆ.