ಸೋಮವಾರಪೇಟೆ, ಡಿ.೨೭: ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ಕೂತಿ ಗ್ರಾಮದ ೨ ವಾರ್ಡ್ಗಳಿಗೆ ಘೋಷಣೆಯಾಗಿದ್ದ ಉಪ ಚುನಾವಣೆ ಇಂದು ನಡೆದಿದ್ದು, ಶೇ. ೭೮.೯೧ರಷ್ಟು ಮತದಾನವಾಗಿದೆ.

೨ ವಾರ್ಡ್ಗಳಿಗೆ ಸಂಬAಧಿಸಿದAತೆ ಒಟ್ಟು ೫ ಮಂದಿ ಕಣದಲ್ಲಿದ್ದು, ಮತಯಾಚನೆಯೂ ಭರ್ಜರಿಯಾಗಿ ನಡೆದಿತ್ತು. ಇಂದು ಬೆಳಗ್ಗಿನಿಂದಲೇ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಮತಗಟ್ಟೆಯ ಬಳಿ ಜಮಾಯಿಸಿ ಮತಯಾಚನೆಯ ಅಂತಿಮ ಹಂತದ ಕಸರತ್ತು ನಡೆಸಿದರು.

ಅಭಿವೃದ್ಧಿ ವಂಚಿತ ಹಾಗೂ ಮೀಸಲಾತಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಕೂತಿ ಗ್ರಾಮಸ್ಥರು ಈ ಹಿಂದಿನ ಚುನಾವಣೆಯನ್ನು ಬಹಿಷ್ಕರಿಸಿದ್ದರು. ಮೀಸಲಾತಿ ಬದಲಾವಣೆ ಮಾಡಿ ಇದೀಗ ಮತ್ತೆ ಚುನಾವಣೆ ನಡೆಸಲಾಗಿದ್ದು, ಸಾಮಾನ್ಯ ಮಹಿಳಾ ಮೀಸಲು ಕ್ಷೇತ್ರದಿಂದ ಕೆ.ಎಂ. ದಿವ್ಯ, ಹೆಚ್.ಎಸ್. ಮಂಜುಳಾ ಹಾಗೂ ಕೆ.ಎ. ಸುಕನ್ಯ ಅವರುಗಳು ಕಣದಲ್ಲಿದ್ದು, ಹಿಂದುಳಿದ ವರ್ಗ ಎ. ಮೀಸಲು ಕ್ಷೇತ್ರದಿಂದ ಟಿ.ಕೆ. ಚಂದ್ರಶೇಖರ್ (ಪ್ರವೀಣ್) ಹಾಗೂ ವಿ. ಹರೀಶ್ ಅವರುಗಳು ಸ್ಪರ್ಧಿಸಿದ್ದಾರೆ.

ಕೂತಿ ಸರ್ಕಾರಿ ಶಾಲೆಯಲ್ಲಿ ತೆರೆಯಲಾಗಿದ್ದ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯಿತು. ಪೂರ್ವಾಹ್ನ ೧೧.೩೦ರ ಸುಮಾರಿಗೆ ಶೇ. ೫೦ರಷ್ಟು ಮತದಾನವಾಗಿತ್ತು. ನಂತರ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಸಾಗಿತು.

೭೦೨ ಮಂದಿ ಮತದಾರರ ಪೈಕಿ ೫೫೪ ಮಂದಿ ತಮ್ಮ ಹಕ್ಕು ಚಲಾಯಿಸಿದರು. ೨೭೮ ಪುರುಷರು ಹಾಗೂ ೨೭೬ ಮಹಿಳೆಯರು ಚುನಾವಣೆಯಲ್ಲಿ ಪಾಲ್ಗೊಳ್ಳುವ ಮೂಲಕ ಶೇ. ೭೮.೯೧ರಷ್ಟು ಮತದಾನವಾಗಿದ್ದು, ತಾ. ೩೦ರಂದು ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿಯಾಗಿ ವೆಂಕಟ್‌ನಾಯಕ ಕಾರ್ಯನಿರ್ವಹಿಸಿದರು. ಸೋಮವಾರಪೇಟೆ ಪೊಲೀಸ್ ಠಾಣೆಯ ಮುಖ್ಯಪೇದೆ ರಮೇಶ್ ಹಾಗೂ ಸಿಬ್ಬಂದಿ ಪ್ರವೀಣ್ ಅವರುಗಳು ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.