ಮಡಿಕೇರಿ, ಡಿ. ೨೮: ಈ ಬಾರಿಯ ರಾಜ್ಯಮಟ್ಟದ ಯುವಜನೋತ್ಸವ ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿ ಚುಂಚನಗಿರಿ ವಿಶ್ವವಿದ್ಯಾನಿಲಯ ಮಹಾ ಸಂಸ್ಥಾನದಲ್ಲಿ ಜ. ೩ ಹಾಗೂ ೪ ರಂದು ನಡೆಯಲಿದೆ.
ಈ ಹಿಂದೆ ಕೊಡಗು ಜಿಲ್ಲಾಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದವರು ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವಂತೆ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್. ಪಿ.ಪಿ. ಹಾಗೂ ಕಾರ್ಯದರ್ಶಿ ಕೆ.ಕೆ. ಗಣೇಶ್ ಅವರುಗಳು ಕೋರಿಕೊಂಡಿದ್ದಾರೆ. ಹೆಚ್ಚಿನ ವಿವರಗಳಿಗೆ ದೂ. ೦೮೨೭೨೨೨೮೫೮೯ ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ.