ಮಡಿಕೇರಿ, ಡಿ. ೨೮: ಮದೆನಾಡು ಗ್ರಾ.ಪಂ. ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದ ಬಲೆಕಂಡಿ ಗಿರಿಜನ ಹಾಡಿ ಬಳಿಯಿರುವ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೊಡಗು ರಕ್ಷಣಾ ವೇದಿಕೆ ಗ್ರಾ.ಪಂ. ಅಧ್ಯಕ್ಷರಿಗೆ ಮನವಿ ಪತ್ರ ಸಲ್ಲಿಸಿದೆ. ಗ್ರಾ.ಪಂ. ಅಧ್ಯಕ್ಷರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ಹಾಗೂ ಸದಸ್ಯರು ಗ್ರಾಮದ ಸಮಸ್ಯೆಗಳ ಕುರಿತು ಗಮನಸೆಳೆದರು. ಈ ಎಲ್ಲಾ ಬೇಡಿಕೆಗಳನ್ನು ಒಂದು ತಿಂಗಳೊಳಗೆ ಈಡೇರಿಸದಿದ್ದಲ್ಲಿ ಮದೆ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮನವಿ ನೀಡುವ ಸಂದರ್ಭ ವೇದಿಕೆಯ ಬೆಟ್ಟತ್ತೂರು ಅಧ್ಯಕ್ಷ ಕೊಂಪುಳಿರ ಜನಾರ್ಧನ್, ಉಪಾಧ್ಯಕ್ಷ ಸೋಮಯ್ಯ, ಸದಸ್ಯರಾದ ಕೆ.ಎ. ಪೊನ್ನಪ್ಪ, ಕುಞಪ್ಪ, ಮೇದಪ್ಪ, ಕೆ.ಡಿ. ಗೌರಮ್ಮ, ಚೆರಿಯಮನೆ ಚಂದ್ರ ಶೇಖರ್ ಮತ್ತಿತರರು ಹಾಜರಿದ್ದರು.