ಕೂಡಿಗೆ, ಡಿ. ೨೮: ಕೂಡುಮಂಗಳೂರು ಶ್ರೀ ಸಾಯಿ ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪ್ರಥಮ ವರ್ಷದ ಐದು ಪಂಚಾಯಿತಿ ವ್ಯಾಪ್ತಿಯ ಪ್ರೋ ಕಬಡ್ಡಿ ಪಂದ್ಯಾಟದಲ್ಲಿ ಮಿಲನ್ ಫ್ರೆಂಡ್ಸ್ ಕೊಡಗು ತಂಡ ಪ್ರಥಮ ಸ್ಥಾನವನ್ನು ಗಳಿಸಿತು.
ದ್ವೀತಿಯ ಸ್ಥಾನವನ್ನು ಕೂಡ್ಲೂರಿನ ಮಾಸ್ಟರ್ ಬ್ಲಾಸ್ಟರ್ ತಂಡ ಪಡೆಯಿತು. ಮೂರನೇಯ ಸ್ಥಾನವನ್ನು ಕೂಡಿಗೆಯ ಟೀಮ್ ಕಮಲ ಗಳಿಸಿದರೆ, ೪ನೇ ಸ್ಥಾನವನ್ನು ಟಿಡಿಎಫ್ಸಿ ತೊರೆನೂರು ತಂಡ ತನ್ನದಾಗಿಸಿಕೊಂಡಿತು.
ಉದ್ಯಮಿ ಹರಿಪ್ರಸಾದ್ ಬಹುಮಾನ ವಿತರಿಸಿ ಮಾತನಾಡಿ, ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡಾ ಬೆಳವಣಿಗೆಗೆ ಪೂರಕವಾಗಬೇಕು. ಒಗ್ಗೂಡುವಿಕೆ ಮೂಲಕ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು
ಬಹುಮಾನ ವಿತರಣೆಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಗೌರವ ಅಧ್ಯಕ್ಷ ಕೆ.ಕೆ. ಹರಿಪ್ರಸಾದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ತಾಲೂಕಿನ ದೈಹಿಕ ಅಧೀಕ್ಷಕ ಡಾ. ಸದಾಶಿವ ಎಸ್. ಪಲ್ಲೇದ್, ಕಾರ್ಯದರ್ಶಿ ರವಿ, ಶಿರಂಗಾಲದ ಗುತ್ತಿಗೆದಾರರಾದ ಕಿರಣ್, ರಂಚು, ಪ್ರಮುಖರಾದ ಸುರೇಶ್, ಆಕಾಶ್, ಕಾರ್ತಿಕ್, ಹೇಮಂತ್, ಆದರ್ಶ, ಕರಣ್, ಮಹೇಶ್ಕುಮಾರ್, ಪ್ರವೀಣ್ಕುಮಾರ್, ಶಿರಂಗಾಲದ ಮಧು, ತೊರೆನೂರು ಕೃಷ್ಣ, ಸುನಿಲ್ ಭಾಗವಹಿಸಿದ್ದರು.