ವೀರಾಜಪೇಟೆ, ಡಿ. ೨೮: ಸಮೀಪದ ಬಿಳುಗುಂದ ಗ್ರಾಮದಲ್ಲಿ ಕಾಡಾನೆ ದಾಳಿಗೆ ಸಾವಿರಾರು ರೂಪಾಯಿ ಮೌಲ್ಯದ ಭತ್ತ ಫಸಲು ನಾಶವಾಗಿದೆ. ಕೆ.ಎಸ್. ಮೊÊದಿನ್ ಎಂಬವರಿಗೆ ಸೇರಿದ ಗದ್ದೆಯಲ್ಲಿ ನಿನ್ನೆ ಸಂಜೆ ಭತ್ತವನ್ನು ಬಡಿದು ಸುಮಾರು ೨೬ ಚೀಲದಲ್ಲಿ ತುಂಬಿಸಲಾಗಿತ್ತು ಮತ್ತು ಭತ್ತದರಾಶಿಯೂ ಹಾಗೆ ಕಣದಲ್ಲಿ ಇತ್ತು. ಇಂದು ಬೆಳಿಗ್ಗೆ ಗದ್ದೆಗೆ ಬಂದು ನೋಡಿದಾಗ ಕಾಡಾನೆಯ ಹಿಂಡು ಫಸಲನ್ನು ನಾಶಪಡಿಸಿವೆ. ಸೂಕ್ತ ಪರಿಹಾರಕ್ಕೆ ಒತ್ತಾಯಿಸಿರುವ ಸ್ಥಳೀಯರು, ಕಾಡಾನೆ ಹಾವಳಿ ತಡೆಗೆ ಶಾಶ್ವತ ಕ್ರಮಕ್ಕೆ ಆಗ್ರಹಿಸಿದ್ದಾರೆ.