ಕುಶಾಲನಗರ, ಡಿ. ೨೭: ನೂತನ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ಪ.ಪಂ. ಅನ್ನು ಪುರಸಭೆ ಯಾಗಿ ಮೇಲ್ದರ್ಜೆಗೆ ಏರಿಸಲು ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿರುವ ಹಿನೆÀ್ನಲೆಯಲ್ಲಿ ಕುಶಾಲನಗರ ಬಿಜೆಪಿ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಪ.ಪಂ.ಅಧ್ಯಕ್ಷ ಬಿ.ಜೈವರ್ಧನ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಪುರಸಭೆಯಾಗಿ ಮೇಲ್ದರ್ಜೆಗೆ ಏರಿಸಲು ಶ್ರಮಿಸಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಕಾರ್ಯವನ್ನು ಶ್ಲಾಘಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಕುಶಾಲನಗರವನ್ನು ಪುರಸಭೆಯಾಗಿಸಿ ಮೇಲ್ದರ್ಜೆಗೆ ಏರಿಸಲು ಸರಕಾರದ ಅನುಮತಿ ದೊರಕಿಸುವಲ್ಲಿ ಶಾಸಕರು ಯಶಸ್ವಿಯಾಗಿರುವುದು ಮಹತ್ವದ ಸಾಧನೆಯಾಗಿದೆ. ಅವರ ನಿರಂತರ ಪ್ರಯತ್ನದಿಂದ ಸರಕಾರದ ಗ್ರೀನ್ ಸಿಗ್ನಲ್ ಲಭಿಸಿದ್ದು, ಈ ಹಿಂದೆ ಕೂಡ ಕುಶಾಲನಗರವನ್ನು ತಾಲೂಕಾಗಿಸು ವಲ್ಲಿ ಶಾಸಕ ಅಪ್ಪಚ್ಚುರಂಜನ್ ಸತತ ಪರಿಶ್ರಮ ವಹಿಸಿದ್ದರು ಎಂದು ಸ್ಮರಿಸಿದರು. ಕುಶಾಲನಗರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ೧೨ ಕೋಟಿ ರೂ. ಅನುದಾನ ದೊರಕಿಸುವಲ್ಲೂ ಶಾಸಕರು ಸಫಲರಾಗಿದ್ದು, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಕುಡಾ ಅಧ್ಯಕ್ಷ ಎಂ.ಎA.ಚರಣ್ ಮಾತನಾಡಿ, ಪುರಸಭೆಯಾಗಿ ಮೇಲ್ದರ್ಜೆಗೆ ಏರಿದ ಹಿನ್ನಲೆಯಲ್ಲಿ ಕುಶಾಲನಗರ ಸರ್ವತೋಮುಖ ಅಭಿವೃದ್ಧಿ ಹೊಂದಲಿದೆ ಎಂದರು. ಮಂಡಲ ಬಿಜೆಪಿ ವಕ್ತಾರ ಕೆ.ಜಿ. ಮನು ಮಾತನಾಡಿ, ೨೦೧೪ ರಲ್ಲಿ ಪುರಸಭೆ ಹೋರಾಟ ಆರಂಭವಾಯಿತು. ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷರು, ಮುಖ್ಯಾಧಿ ಕಾರಿ, ಸಿಬ್ಬಂದಿಗಳ ಶ್ರಮ, ಮುಳ್ಳುಸೋಗೆ, ಗುಡ್ಡೆಹೊಸೂರು ಗ್ರಾಪಂ.ಗಳ ಜನಪ್ರತಿನಿಧಿಗಳು, ಅಧಿಕಾರಿಗಳ ಬೆಂಬಲ ಹಾಗೂ ಶಾಸಕರ ಮುತುವರ್ಜಿಯಿಂದ ಪುರಸಭೆ ಘೋಷಣೆಯಾಗಿದ್ದು ರಾಜ್ಯಪಾಲರ ಅಂಕಿತ ಬಳಿಕ ಮುಂದಿನ ಒಂದು ತಿಂಗಳಲ್ಲಿ ಅಧಿಕೃತ ವಾಗಿ ಘೋಷಣೆಯಾಗಲಿದೆ ಎಂದರು. ಮುಳ್ಳುಸೋಗೆ ಗ್ರಾಪಂ ಅಧ್ಯಕ್ಷ ಬಿ.ಕೆ.ಚೆಲುವರಾಜು, ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯ ಪ್ರವೀಣ್, ಪ.ಪಂ. ಸದಸ್ಯ ಅಮೃತ್ ರಾಜ್, ಮಂಡಲ ಪ್ರಧಾನ ಕಾರ್ಯದರ್ಶಿ ಎಂ. ಡಿ. ಕೃಷ್ಣಪ್ಪ, ನಗರ ಸಹ ಪ್ರಮುಖ್ ಎಚ್.ಡಿ.ಶಿವಾಜಿ, ಮುಳ್ಳುಸೋಗೆ ಶಕ್ತಿ ಕೇಂದ್ರದ ಅಧ್ಯಕ್ಷ ಎಸ್.ಬಿ.ಗಣಪತಿ, ಗುಡ್ಡೆಹೊಸೂರು ಗ್ರಾಪಂ ಸದಸ್ಯ ಪ್ರವೀಣ್, ನಿತ್ಯಾನಂದ ಇದ್ದರು.