ಪೊನ್ನಂಪೇಟೆ, ಡಿ. ೨೭: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಇಂದಿನಿAದ ತಾ. ೩೧ರ ವರೆಗೆ ಆಯೋಜಿಸಲಾಗಿರುವ ದಕ್ಷಿಣ ವಲಯ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಮಹಿಳೆಯರ ಹಾಕಿ ಪಂದ್ಯಾವಳಿಗೆ ಚಾಲನೆ ದೊರೆತಿದೆ.
ಉದ್ಘಾಟನೆಯನ್ನು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಡಾ. ಕಿಶೋರ್ ಕುಮಾರ್, ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ನಂತರ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟಾçರ್ ಡಾ. ಕಿಶೋರ್ ಕುಮಾರ್ ಕೊಡಗು ಜಿಲ್ಲೆಯ ಸಾಕಷ್ಟು ಕ್ರೀಡಾಪಟುಗಳು ರಾಷ್ಟç ಹಾಗೂ ಅಂತರಾಷ್ಟಿçÃಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕೊಡಗಿನ ಜನತೆ ಕ್ರೀಡೆ ಮತ್ತು ಸೇನೆಗೆ ನೀಡುತ್ತಿರುವ ಕೊಡುಗೆ ಇಲ್ಲಿನ ವಿಶೇಷತೆಯಲ್ಲೊಂದು ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ದಕ್ಷಿಣ ವಲಯ ಮಟ್ಟದ ಮಹಿಳೆಯರ ಹಾಕಿ ಪಂದ್ಯಾವಳಿಯನ್ನು ಪೊನ್ನಂಪೇಟೆ ಯಲ್ಲಿ ಆಯೋಜಿಸಿರುವುದು ಸಂತಸ ತಂದಿದೆ. ಕ್ರೀಡೆಯು ಯುವ ಜನತೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢವಾಗಲು ಸಹಕಾರಿಯಾಗು ವುದರ ಜೊತೆಗೆ, ಕ್ರೀಡೆಯ ಆಧಾರದಲ್ಲಿ ಹುದ್ದೆ ಗಿಟ್ಟಿಸಿಕೊಂಡು ಬದುಕು ಕಟ್ಟಿಕೊಳ್ಳುವ ಅವಕಾಶವನ್ನು ಕಲ್ಪಿಸಿದೆ. ಈ ನಿಟ್ಟಿನಲ್ಲಿ ಯುವ ಸಮೂಹ ಕ್ರೀಡೆಯಿಂದ
(ಮೊದಲ ಪುಟದಿಂದ) ಹಿಂದೆ ಸರಿಯ ಬಾರದು. ಸೋಲು-ಗೆಲುವುಗಳಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ಸಲಹೆ ನೀಡಿದರು. ಅಂತರಾಷ್ಟಿçÃಯ ಬಾಸ್ಕೆಟ್ ಬಾಲ್ ಆಟಗಾರ್ತಿ ಡಾ. ಪುಷ್ಪಾ ಕುಟ್ಟಣ್ಣ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳ ಬೇಕು. ಕ್ರೀಡೆಯು ಸಾಮಾಜಿಕ ಹಾಗೂ ರಾಷ್ಟಿçÃಯ ಭಾವೈಕ್ಯತೆಯನ್ನು ಮೂಡಿಸಲು ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ವೀರಾಜಪೇಟೆ ತಾಲೂಕು ಶಾಸಕರಾದ ಕೆ.ಜಿ.ಬೋಪಯ್ಯ ಹಾಕಿ ಸ್ಟಿಕ್ ನಿಂದ ಚೆಂಡನ್ನು ತಳ್ಳುವ ಮೂಲಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಕೋರಿದರು.
ಈ ಸಂದರ್ಭ ಹಿರಿಯ ಅಂತರಾಷ್ಟಿçÃಯ ಹಾಕಿ ಆಟಗಾರ ಒಲಂಪಿಯನ್ ಬಾಳೆಯಡ ಕೆ. ಸುಬ್ರಮಣಿ, ಮಡಿಕೇರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಾಂಡ್ ಗಣಪತಿ, ವೀರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಟಿ.ಕೆ. ಬೋಪಯ್ಯ, ಗೋಣಿಕೊಪ್ಪ ಕಾವೇರಿ ಕಾಲೇಜು ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ, ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜೆರಾಲ್ಡ್ ಸಂತೋಷ್ ಡಿಸೋಜ, ಕ್ರೀಡಾ ಕೂಟದ ಸಂಚಾಲಕಿ ಪಿ.ಎಂ. ರಾಖಿ ಪೂವಣ್ಣ ಇದ್ದರು. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯಗಳ ೨೨ ವಿಶ್ವವಿದ್ಯಾನಿಲಯಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು. ತಾ. .೩೧ ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಫಲಿತಾಂಶ: ಬೆಳಗಾವಿ ವಿವಿ ವಿರುದ್ಧ ಭಾರತಿದಾಸನ್ ವಿವಿ ೮-೦ ಗೋಲುಗಳ ಜಯ, ಅಳಗಪ್ಪ ವಿವಿ ವಿರುದ್ಧ ಅಣ್ಣಾಮಲೈ ಯೂನಿವರ್ಸಿಟಿ ೪-೦ ಗೋಲುಗಳ ಜಯ, ಕೇರಳ ವಿವಿ ವಿರುದ್ಧ ಪೆರಿಯಾರ್ ವಿವಿ ೧-೦ ಗೋಲಿನ ಜಯ, ಅಣ್ಣಾ ಯೂನಿವರ್ಸಿಟಿ ವಿರುದ್ಧ ಭಾರತಿಯಾರ್ ಯೂನಿವರ್ಸಿಟಿ ೪-೦ ಗೋಲುಗಳ ಜಯ, ತಿರುಪತಿ ವೆಂಕಟೇಶ್ವರ ಯೂನಿವರ್ಸಿಟಿ ವಿರುದ್ಧ ಮಧುರೈ ಕಾಮರಾಜ್ ಯೂನಿವರ್ಸಿಟಿ ೬-೦ ಗೋಲು ಗಳ ಜಯ ದಾಖಲಿಸುವ ಮೂಲಕ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡರೆ, ಅವಿನಾಶ್ ಲಿಂಗ್, ಮದರ್ ತೆರೇಸಾ, ತಿರುವಳ್ಳುವರ್, ರಾಣಿ ಚೆನ್ನಮ್ಮ, ಮದ್ರಾಸ್, ಮಹಾತ್ಮ ಗಾಂಧಿ, ಆಂಧ್ರ, ಟಿಎನ್‌ವಿಇಎಸ್ ಯೂನಿವರ್ಸಿಟಿ ವಾಕ್-ಓವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡವು. -ಚನ್ನನಾಯಕ