ನಾಪೋಕ್ಲು, ಡಿ. ೨೭: ಮೂರ್ನಾಡು ವಿದ್ಯಾಸಂಸ್ಥೆಯ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚೌರಿರ ಕಪ್ ಫುಟ್ಬಾಲ್ ಕ್ರೀಡಾಕೂಟದ ಮೊದಲನೆ ದಿನದ ಪಂದ್ಯಾಟದಲ್ಲಿ ಮಳವಂಡ ಮತ್ತು ಕೊಟ್ಟಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಳವಂಡ ತಂಡವು ಕೊಟ್ಟಂಗಡ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು.

ಮೇಕೇರಿರ ಮತ್ತು ಆಡ್ಡೇಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಕೇರಿರ ತಂಡವು ಒಂದು ಗೋಲಿನಿಂದ ಜಯಗಳಿಸಿತು. ಕುಪ್ಪಂಡ (ಕೈಕೇರಿ) ಮತ್ತು ಪೆಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ತಂಡವು ಪೆಮ್ಮಂಡ ತಂಡವನ್ನು ಒಂದು ಗೋಲುಗಳ ಅಂತರದಿAದ ಸೋಲಿಸಿತು. ಮುಕ್ಕಾಟಿರ (ದೇವಣಗೇರಿ) ಮತ್ತು ಪಳಂಗAಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಪಳಂಗAಡ ತಂಡದ ಗೈರುಹಾಜರು ಹಿನ್ನೆಲೆಯಲ್ಲಿ ಮುಕ್ಕಾಟಿರ ತಂಡ ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು.

ಅಕ್ಕಪ್ಪಂಡ ಮತ್ತು ಪಾಲಂದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪಾಲಂದಿರ ತಂಡವು ಅಕ್ಕಪ್ಪಂಡ ತಂಡವನ್ನು ಒಂದು ಗೋಲುಗಳ ಅಂತರದಿAದ ಮಣಿಸಿತು. ಕುಲ್ಲಚಂಡ ಮತ್ತು ಅಲ್ಲುಮಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲುಮಡ ತಂಡವು ಕುಲ್ಲಚಂಡ ತಂಡವನ್ನು ಒಂದು ಗೋಲು ಅಂತರದಿAದ ಸೋಲಿಸಿತು. ಐಚಂಡ ಮತ್ತು ಆದೇಂಗಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಆದೇಂಗಡ ತಂಡವು ೨-೧ ಗೋಲುಗಳ ಅಂತರದಿAದ ಐಚಂಡ ತಂಡವನ್ನು ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.